ಬಂಟ್ವಾಳ: ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ 9 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬಂಟ್ವಾಳ ಕುಕ್ಕಿಪಾಡಿ ಮಾವಿನಕಟ್ಟೆ ಸಮೀಪದ ಕೇಂತಲೆ ಮನೆಯಲ್ಲಿ ಅ. 25ರಂದು ರಾತ್ರಿ ನಡೆದಿದೆ. ಕೇಂತಲೆ ಮನೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ.
ಅ. 25ರಂದು ರಾತ್ರಿ ಅಮೃತ್ ಮನೆಯ ಎದುರಿನ ಹಾಲ್ನಲ್ಲಿ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮನೆಯ ಕಿಟಕಿಯಲ್ಲಿ ಈ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗವು ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ಇದರಿಂದ ಉಸಿರುಗಟ್ಟಿದ ಬಾಲಕ ಹಗ್ಗದಲ್ಲಿ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ಮನೆಯಲ್ಲಿದ್ದ ಬಾಲಕನ ಸಹೋದರಿ ಪ್ರಾರ್ಥನಾ, ಅಮೃತ್ ಮಾತನಾಡುತ್ತಿಲ್ಲ ಎಂದು ತಿಳಿಸಿ ಜೋರಾಗಿ ಕೂಗುತ್ತಾ ಸಮೀಪದ ಮನೆಯಲ್ಲಿದ್ದ ಚಿಕ್ಕಪ್ಪನ ಮನೆಗೆ ಓಡಿ ಬಂದಿದ್ದಾಳೆ. ಬಳಿಕ ಕುಟುಂಬದವರು ಆನಂದ ಪೂಜಾರಿ ಅವರ ಮನೆಗೆ ತೆರಳಿ ನೋಡಿದಾಗ, ಅಮೃತ್ನ ತಾಯಿ ಗೀತಾ ಅವರು ಬಾಲಕನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅಳುತ್ತಿದ್ದರು ಎನ್ನಲಾಗಿದೆ.
ಕೂಡಲೇ ಬಾಲಕನನ್ನು ಉಪಚರಿಸಿದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KSRTC ಬಸ್–ಬೈಕ್ ಮುಖಾಮುಖಿ ಡಿಕ್ಕಿ : ನವವಿವಾಹಿತ ಸಾವು ಚಿಕ್ಕಮಗಳೂರು: KSRTC ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಸಂಭವಿಸಿ…
ಹಾಸನಾಂಬ ದರ್ಶನಕ್ಕೆ KSRTC ಗುಡ್ ನ್ಯೂಸ್: ಅ. 30ರಿಂದ ವಿಶೇಷ ಟೂರ್ ಪ್ಯಾಕೇಜ್ ಆರಂಭ ;ಟಿಕೆಟ್ ದರ, ವೇಳಾಪಟ್ಟಿ ಬಿಡುಗಡೆ…
ಮಧ್ಯಪ್ರದೇಶ: ಟೈರ್ ಸ್ಫೋಟಗೊಂಡು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರಿಗೆ ಬೆಂಕಿ; ನಾಲ್ವರು ಯುವಕರು ಸಜೀವ ದಹನ ಧಾರ : ದೇವಸ್ಥಾನದಲ್ಲಿ…
ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ - 5 ಕಾರುಗಳು, ಆಂಬ್ಯುಲೆನ್ಸ್ ಜಖಂ ಸುಲ್ತಾನ್‌ಪುರ : ಲೋಕಸಭೆಯ ವಿರೋಧ…
ಕುಂದಾಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ…
ಉಡುಪಿ: ಗೌಶಾಲೆಗಳ ಅಭಿವೃದ್ಧಿಗೆ CSR ನಿಧಿ ಬಳಕೆಗೆ ಒತ್ತಾಯ: ನಿರ್ಮಲಾ ಸೀತಾರಾಮನ್‌ಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಉಡುಪಿ: ರಾಜ್ಯದ…