Featured

ಮಧ್ಯಪ್ರದೇಶ: ಟೈರ್ ಸ್ಫೋಟಗೊಂಡು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರಿಗೆ ಬೆಂಕಿ; ನಾಲ್ವರು ಯುವಕರು ಸಜೀವ ದಹನ – vishwanews24

ಮಧ್ಯಪ್ರದೇಶ: ಟೈರ್ ಸ್ಫೋಟಗೊಂಡು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರಿಗೆ ಬೆಂಕಿ; ನಾಲ್ವರು ಯುವಕರು ಸಜೀವ ದಹನ

ಧಾರ : ದೇವಸ್ಥಾನದಲ್ಲಿ ದರ್ಶನ ಪಡೆದು ಮನೆಗೆ ಮರಳುತ್ತಿದ್ದ ಐವರು ಸ್ನೇಹಿತರಿದ್ದ ಕಾರು ಭೀಕರ ಅಪಘಾತಕ್ಕೀಡಾಗಿ ನಾಲ್ವರು ಯುವಕರು ಸಜೀವ ದಹನಗೊಂಡಿರುವ ದಾರುಣ ಘಟನೆ ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿ ನಡೆದಿದೆ. ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ವಾಹನ ಸೇತುವೆಯಿಂದ ಕೆಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಾರಿನಿಂದ ಹೊರಗೆ ಬಿದ್ದಿದ್ದ ಮತ್ತೊಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಗಂಭೀರವಾಗಿ ಗಾಯಗೊಂಡಿದ್ದಾನೆ.

ಭಾನುವಾರ ತಡರಾತ್ರಿ ಸುಮಾರು 11.14ರಿಂದ 11.30ರ ನಡುವೆ ಸಾದಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲೇಬಡ್–ನಾಯಗಾಂವ್ ಹಾಗೂ ಮೌ–ನೀಮಚ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೀರಾ ಧಾಬಾ ಮತ್ತು ಸಂಗೇಶರ ಸಮೀಪದ ಸೇತುವೆಯ ಬಳಿ ಈ ಅಪಘಾತ ಸಂಭವಿಸಿದೆ.

ಸಾಂಗೋರ್ ಗ್ರಾಮದ ಐವರು ಯುವಕರು ಸಾಂವರಿಯಾ ಸೇಠ್ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಸ್ವಿಫ್ಟ್ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಸೇತುವೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಕಾರಿನ ಚಾಲಕನ ಬದಿಯ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಕಾರು ಸೇತುವೆಯ ಬಳಿ ತಗ್ಗಿಗೆ ಬಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕ್ಷಿಪ್ರವಾಗಿ ಇಡೀ ಕಾರನ್ನು ಆವರಿಸಿದ್ದರಿಂದ ಒಳಗಿದ್ದ ಯುವಕರಿಗೆ ಹೊರಬರಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಈ ಭೀಕರ ಅಪಘಾತದಲ್ಲಿ ಭೀಮ್ ಢಾಕಡ್ (24), ಆದಿತ್ಯ ತಿವಾರಿ (22), ಚೇತನ್ ಢಾಕಡ್ (21) ಮತ್ತು ಅಭಿಷೇಕ್ ಸೋಲಂಕಿ (19) ಮೃತಪಟ್ಟಿದ್ದಾರೆ. ನಾಲ್ವರೂ ಸಾಂಗೋರ್ ಗ್ರಾಮದ ನಿವಾಸಿಗಳಾಗಿದ್ದು, ಕಾರಿನೊಳಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಬಳಿಕ ಕಾರಿನೊಳಗಿದ್ದ ನಾಲ್ವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಧಾರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.

ಕಾರಿನಲ್ಲಿದ್ದ ತುಷಾರ್ ಮುಖೇಶ್ ಮಂಡ್ಲೋಯಿ (20) ಅಪಘಾತದ ರಭಸಕ್ಕೆ ಹೊರಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಆತನಿಗೆ ಶೇ. 35ರಿಂದ 40ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುವಿಗೆ ಧಾರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ಗೆ ರವಾನಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರೂ ಕಾರು ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಧಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಾರುಲ್ ಬೇಲಾಪುರ್ಕರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅವರ ನಿರ್ದೇಶನದಂತೆ ಸಾದಲ್‌ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಟೈರ್ ಸ್ಫೋಟಗೊಂಡ ನಿಖರ ಕಾರಣ ಮತ್ತು ಅಪಘಾತದ ಇತರ ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ.

Vishwa News 24

Recent Posts

ಬಂಟ್ವಾಳ : ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ, ಉಸಿರುಗಟ್ಟಿ ಬಾಲಕ ಸಾವು – vishwanews24

ಬಂಟ್ವಾಳ : ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ, ಉಸಿರುಗಟ್ಟಿ ಬಾಲಕ ಸಾವು ಬಂಟ್ವಾಳ: ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ…

10 seconds ago

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ : ಹಲವರಿಗೆ ಗಾಯ – vishwanews24

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ - 5 ಕಾರುಗಳು, ಆಂಬ್ಯುಲೆನ್ಸ್ ಜಖಂ ಸುಲ್ತಾನ್‌ಪುರ : ಲೋಕಸಭೆಯ ವಿರೋಧ…

3 hours ago

ಕುಂದಾಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು – vishwanews24

ಕುಂದಾಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ…

3 hours ago

ಉಡುಪಿ:  ಗೌಶಾಲೆಗಳ ಅಭಿವೃದ್ಧಿಗೆ CSR ನಿಧಿ ಬಳಕೆಗೆ ಒತ್ತಾಯ: ನಿರ್ಮಲಾ ಸೀತಾರಾಮನ್‌ ಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ – vishwanews24

ಉಡುಪಿ:  ಗೌಶಾಲೆಗಳ ಅಭಿವೃದ್ಧಿಗೆ CSR ನಿಧಿ ಬಳಕೆಗೆ ಒತ್ತಾಯ: ನಿರ್ಮಲಾ ಸೀತಾರಾಮನ್‌ಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಉಡುಪಿ: ರಾಜ್ಯದ…

3 hours ago

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ , ಮಾರಾಟ – vishwanews24

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ - ಮಾರಾಟ. ಉಡುಪಿ : ಮಲಬಾರ್…

3 hours ago

ಸೌಜನ್ಯ ಪ್ರಕರಣ ತನಿಖೆ ನಡೆಸಿದ್ದ ಪೊಲೀಸ್‌ ಅಧಿಕಾರಿಗೆ ಎಸ್‌ಐಟಿ ಬುಲಾವ್‌ – vishwanews24

ಸೌಜನ್ಯ ಪ್ರಕರಣ ತನಿಖೆ ನಡೆಸಿದ್ದ ಪೊಲೀಸ್‌ ಅಧಿಕಾರಿಗೆ ಎಸ್‌ಐಟಿ ಬುಲಾವ್‌ ಮಂಗಳೂರು: ಧರ್ಮಸ್ಥಳ  ಸೌಜನ್ಯ ಪ್ರಕರಣದ  ಮರು ತನಿಖೆಯಲ್ಲಿ ಮಹತ್ವದ…

4 hours ago