ಬಂಟ್ವಾಳ: ತಲಪಾಡಿಯಲ್ಲಿ ಆಟೋ ರಿಕ್ಷಾ ಪಲ್ಟಿ: ಇಬ್ಬರಿಗೆ ಗಾಯ – Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ತಲಪಾಡಿಯಲ್ಲಿ ಆಟೋ ರಿಕ್ಷಾ ಪಲ್ಟಿ: ಇಬ್ಬರಿಗೆ ಗಾಯ

ಬಂಟ್ವಾಳ: ಆಟೋ ರಿಕ್ಷಾ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಬಿ.ಸಿ.ರೋಡ್ ತಲಪಾಡಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ತಲಪಾಡಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.

ಘಟನೆಯಲ್ಲಿ ಚಾಲಕ ಹಾಗೂ ಪ್ರಯಾಣಿಕ ಇಬ್ಬರೇ ಇದ್ದ ಬಗ್ಗೆ ಸ್ಥಳೀಯರು ತಿಳಿಸಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡರೆ ಪ್ರಯಾಣಿಕನಿಗೂ ಗಾಯವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ: ಗೆಜ್ಜೆಗಿರಿ ಯಕ್ಷಗಾನದ ಬ್ಯಾನರ್ ಹರಿದ ಪ್ರಕರಣಕ್ಕೆ ತಿರುವು – ಅಪ್ರಾಪ್ತ ಮಕ್ಕಳಿಂದ ತಪ್ಪೋಪಿಗೆ  – Vishwanews24

Leave a Reply