ಬಂಟ್ವಾಳ: ಪೊಳಲಿ ದೇವಸ್ಥಾನದಲ್ಲೂ ಹಿಂದೂಯೇತರರಿಗೆ ವ್ಯಾಪಾರ ನಡೆಸಲು ಅವಕಾಶ ಕೊಡಬಾರದು :  ಹಿಂಜಾವೇ ಮನವಿ – Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ಪೊಳಲಿ ದೇವಸ್ಥಾನದಲ್ಲೂ ಹಿಂದೂಯೇತರರಿಗೆ ವ್ಯಾಪಾರ ನಡೆಸಲು ಅವಕಾಶ ಕೊಡಬಾರದು :  ಹಿಂಜಾವೇ ಮನವಿ – Vishwanews24

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುರಾಣ ಪ್ರಸಿದ್ಧ ಪೊಳಲಿಯ ರಾಜರಾಜೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಮಾರ್ಚ್ 14 ರಿಂದ ಆರಂಭಗೊಂಡಿದ್ದು ಹಿಂದೂಯೇತರರಿಗೆ ಅಂಗಡಿ , ಸ್ಟಾಲ್ ಗಳನ್ನು ನಡೆಸಲು ಅವಕಾಶ ಕೊಡಬಾರದು ಎಂಬ ಮನವಿಯನ್ನು ಹಿಂದೂ ಜಾಗರಣ ವೇದಿಕೆ ಮಾಡಿದೆ.

ಕರಾವಳಿಯಲ್ಲಿನ ದೇವಸ್ಥಾನಗಳ ಜಾತ್ರಾ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ಹೇರಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಕೆಲ ಸಂಘಟನೆಗಳು ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದು ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರ ಮಧ್ಯೆ -ಕೋಮು ಸಾಮರಸ್ಯ ಕದಡುವ ಪ್ರಯತ್ನದ ಒಂದು ಭಾಗವು ಆಗಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಬಂಟ್ವಾಳ ತಾಲೂಕಿನ ಹಿಂದೂ ಜಾಗರಣ ವೇದಿಕೆಯು ಆಡಳಿತ ಮಂಡಳಿಗೆ ಮನವಿ ಮಾಡಿದ್ದು ಒಂದು ವೇಳೆ ಅವಕಾಶ ಮಾಡಿಕೊಟ್ಟರೆ ಯಾವುದೇ ತೊಂದರೆ ಅಥವಾ ಯಾವುದೇ ಅನಾಹುತಗಳು ಆದಲ್ಲಿ ನೀವೇ ಜವಾಬ್ಧಾರರು ಎಂಬ ಎಚ್ಚರಿಕೆಯನ್ನು ಸಂಘಟನೆಗಳ ಮುಖಂಡರು ನೀಡಿದ್ದಾರೆ.

ವಾಯುಭಾರ ಕುಸಿತ : ಇಂದಿನಿಂದ ಮಾ.28 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯಿಂದ ಮಳೆಯಾಗುವ ಮುನ್ಸೂಚನೆ – Vishwanews24

Leave a Reply