ಬಂಟ್ವಾಳ : ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ; ಪರಾರಿಯಾಗಿದ್ದ ಆರೋಪಿ ಬಂಧನ – Vishwanews24
ಬಂಟ್ವಾಳ : ಸ್ಲೀಪರ್ ಕೋಚ್ ಬಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ..
ಬೆಳ್ತಂಗಡಿ ಮೂಲದ ಮಹಮ್ಮದ್ ಅಝೀಮ್ ಬಂಧಿತ ಆರೋಪಿ..
ಬಸ್ಸಿನ ಕಿಟಕಿಯಿಂದ ಹೊರಗೆ ಹಾರಿ ಪರಾರಿಯಾಗಿದ್ದ ಆರೋಪಿ..
ಬಂಟ್ವಾಳ : ಖಾಸಗಿ ಬಸ್ಸಿನಲ್ಲಿ ಬೆಂಗಳೂರಿನಿಂದ ಊರಿಗೆ ಪ್ರಯಾಣಿಸುತ್ತಿದ್ದ ಬಂಟ್ವಾಳ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ಮೂಲದ ಮಹಮ್ಮದ್ ಅಝೀಮ್ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಸಹಪ್ರಯಾಣಿಕನಾಗಿದ್ದ ಆರೋಪಿ ಅಝೀಮ್ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದ. ಮೂಲತಃ ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನರ್ ಕಲಿಯುತ್ತಿದ್ದು ಮಂಗಳವಾರ ರಾತ್ರಿ ಖಾಸಗಿ ಬಸ್ಸಿನಲ್ಲಿ ಊರಿಗೆ ಪ್ರಯಾಣಿಸಿದ್ದರು.
ಕರಾವಳಿ ಜಿಲ್ಲೆಗಳಲ್ಲಿ 5 ದಿನಗಳ ಕಾಲ ಬಿಸಿಗಾಳಿ ; ಹವಾಮಾನ ಇಲಾಖೆ ಎಚ್ಚರಿಕೆ – Vishwanews24
ಬಸ್ ಸಕಲೇಶಪುರ ಕಳೆದು ಮುಂದಕ್ಕೆ ಸಾಗುತ್ತಿದ್ದಂತೆಯೇ ಮಲಗಿದ್ದ ಯುವತಿಯ ಮೈಮೇಲೆ ಸಹಪ್ರಯಾಣಿಕ ಕೈ ಮಾಡಿರುವುದು ಕಂಡು ಬಂತು. ಬಳಿಕ ಮತ್ತೊಮ್ಮೆ ಇದೇ ಯತ್ನ ನಡೆದಾಗ ಕೃತ್ಯವನ್ನು ಬಸ್ಸಿನ ಚಾಲಕನ ಗಮನಕ್ಕೆ ತಂದರು. ಆದರೆ ಚಾಲಕನಿಂದ ಯಾವುದೇ ಸ್ಪಂದನೆ ದೊರೆಯದಿದ್ದಾಗ, ಬಸ್ಸಿನಲ್ಲಿದ್ದ ಕೆಲವು ಸಹ ಪ್ರಯಾಣಿಕರು ನೆರವಿಗೆ ಧಾವಿಸಿ ಆತನನ್ನು ವಿಚಾರಿಸಿದಾಗ ಬೆಳ್ತಂಗಡಿಯ ಲಾಯಿಲ ಗ್ರಾಮದ ಮಹಮ್ಮದ್ ಅಝೀಮ್ ಎಂದು ತಿಳಿಸಿದ್ದ. ಮುಂದಕ್ಕೆ ದಾರಿ ಮಧ್ಯೆ ಸಿಗುವ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಎಂದು ಆಕೆ ಹೇಳಿದ ಬಳಿಕ ಆರೋಪಿ ಬಸ್ಸಿನ ಕಿಟಕಿಯಿಂದ ಹೊರಗೆ ಹಾರಿ ಪರಾರಿಯಾಗಿದ್ದ.ಪ್ರಕರಣವನ್ನು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಲಭ್ಯ ಮಾಹಿತಿಗಳನ್ನಾಧರಿಸಿ ಆರೋಪಿ ಮಹಮ್ಮದ್ ಅಝೀಮ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
