ಬಜೆಟ್: ಎಸ್‌ಟಿ ಜಾರಿಗೊಳಿಸಿದ ಅರುಣ್ ಜೇಟ್ಲಿ ಅವರಿಗೆ ಧನ್ಯವಾದ: ನಿರ್ಮಲಾ ಸೀತಾರಾಮನ್ -Vishwanews24 

Featured, ರಾಷ್ಟ್ರ ನ್ಯೂಸ್

ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಐತಿಹಾಸಿಕ ಕ್ರಮವಾಗಿದ್ದು, ಅದನ್ನು ರೂಪಿಸಿದ ಅರುಣ್‌ ಜೇಟ್ಲಿ ಅವರಿಗೆ ನನ್ನ ನಮನ ಸಲ್ಲಿಸುತ್ತೇನೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಇಂದು ಸಂಸತ್ ನಲ್ಲಿ 2020ನೇ ಸಾಲಿನ ಆಯವ್ಯಯ ಪಟ್ಟಿ ಓದುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ಜನರ ಖರೀದಿ ಸಾಮರ್ಥ್ಯ ವೃದ್ಧಿಸುವ ಬಜೆಟ್ ಇದು. ತಂತ್ರಜ್ಞಾನದ ನೆರವಿನಿಂದ ಜನರ ಬದುಕು ಸುಧಾರಿಸಲು ನಾವು ಬದ್ಧರಾಗಿದ್ದೇವೆ. ಸಮಾಜದ ಎಲ್ಲ ವರ್ಗಗಳ ಆಶೋತ್ತರಗಳನ್ನು ಬಿಂಬಿಸುವ ಬಜೆಟ್ ಇದು. 2014–19ರ ಅವಧಿಯಲ್ಲಿ ನಮ್ಮ ಸರ್ಕಾರವು ಅಡಳಿತದಲ್ಲಿ ಬದಲಾವಣೆ ತಂದಿತ್ತು. ಮೂಲಭೂತ ವ್ಯವಸ್ಥೆಯ ಬದಲಾವಣೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ನಾವು ಗಮನ ಕೊಟ್ಟೆವು. ಹಣದುಬ್ಬರ ನಿಯಂತ್ರಣದಲ್ಲಿಡುವ ಜೊತೆಗೆ ಬ್ಯಾಂಕ್‌ಗಳ ಕೆಟ್ಟ ಸಾಲದ ಬಗ್ಗೆ ಗಮನ ನೀಡಲಾಯಿತು.  ಅಂತೆಯೇ ತಮ್ಮ ಭಾಷಣದಲ್ಲಿ ಮಾಜಿ ವಿತ್ತ ಸಚಿವ, ದಿವಂಗತ ಅರುಣ್‌ ಜೇಟ್ಲಿ ಅವರನ್ನು ನೆನೆದರು.