ಬಡವರ ಪಾಲಿನ ಆಶಾಕಿರಣ ಅಲೆವೂರು ಶೇಖರ ಪೂಜಾರಿ ಇನ್ನಿಲ್ಲ.
ಕಾಪು: ಅಲೆವೂರು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಬಡವರ ಪಾಲಿನ ಆಶಾಕಿರಣ, ಕೊಡುಗೈ ದಾನಿಯಾಗಿದ್ದ ಸರ್ವರ ಧರ್ಮದ ಜನರ ಪ್ರೀತಿ ಪಾತ್ರರಾಗಿದ್ದ ಅಲೆವೂರು ಶೇಖರ ಪೂಜಾರಿ ಗುರುವಾರ ರಾತ್ರಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಇಂದಿರಾ ಗಾಂಧಿ ರಾಷ್ಟ್ರೀಯ ಸದ್ಬಾವನಾ ಪ್ರಶಸ್ತಿ,ಏಷ್ಯಾ ಫೆಸಿಫಿಕ್ ಎಕ್ಸಲನ್ಸಿ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಶೇಖರ ಪೂಜಾರಿಯವರು ಭಾಜನರಾಗಿದ್ದರು.

