ಬಡ ಅಶಕ್ತ ಕುಟುಂಬದ ಬೆನ್ನಿಗೆ ನಿಂತ ತುಳುನಾಡ ಹಿಂದೂ ಸೇನೆ ನೂರಕ್ಕೂ ಅಧಿಕ ಮನೆಗಳಿಗೆ ಆಹಾರದ ಕಿಟ್ ವಿತರಣೆ-vishwanews24
ಬಡ ಅಶಕ್ತ ಕುಟುಂಬದ ಬೆನ್ನಿಗೆ ನಿಂತ ತುಳುನಾಡ ಹಿಂದೂ ಸೇನೆ ನೂರಕ್ಕೂ ಅಧಿಕ ಮನೆಗಳಿಗೆ ಆಹಾರದ ಕಿಟ್ ವಿತರಣೆ
ಕಾಪು: ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟಕ್ಕೀಡಾಗುವ ಬಡಕುಟುಂಬದ ಕಣ್ಣೀರು ಒರೆಸುವ ಕೆಲಸಕ್ಕೆ ತುಳುನಾಡು ಹಿಂದು ಸೇನೆ ಕೈಹಾಕಿದೆ ತಮ್ಮ ಸಂಸ್ಥೆಯ ಸ್ವಯಂಸೇವಕರಿಂದ ಹಾಗೂ ಸಮಾಜದ ಒಳಿತು ಬಯಸುವ ಸೇವಕರಿಂದ ಸಂಗ್ರಹಿಸಿದ ಧನಸಹಾಯದ ಬಡಕುಟುಂಬದ ಆಹಾರ ಕಿಟ್ಟಣ್ಣ ಒದಗಿಸುವ ಮುಖಾಂತರ ಅವರ ಬೆನ್ನಿಗೆ ನಿಂತು ಸಹಕಾರ ಮಾಡುವ ಕೆಲಸ ಮಾಡುತ್ತಿದೆ. ಇಂದು ಕಾಪು ಹಳೆ ಮಾರಿಗುಡಿ ದೇವಸ್ಥಾನದ ವಠಾರದಲ್ಲಿ ಕಾರ್ಯಕ್ರಮಕ್ಕೆ ಸರಳವಾಗಿ ಚಾಲನೆ ನೀಡಲಾಯಿತು ಕಾಪು ಪುರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ತಂಡವನ್ನು ರಚನೆ ಮಾಡಿಕೊಂಡು ತಮ್ಮ ತಮ್ಮ ವಾರ್ಡಿನಲ್ಲಿ ಸಮಸ್ಯೆಯಿರುವ ಬಡ ಕುಟುಂಬಗಳನ್ನು ಗುರುತಿಸಿ ನೇರವಾಗಿ ಅವರ ಮನೆ ಬಾಗಿಲಿಗೆ ಆಹಾರದ ಕಿಟ್ಟು ಮುಟ್ಟಿಸುವ ಕೆಲಸ ಸಂಸ್ಥೆಯ ಸ್ವಯಂಸೇವಕರು ಮಾಡಲಿದ್ದಾರೆ ಹಾಗೂ ಮುಂದಿನ ದಿನದಲ್ಲಿ ಯಾವುದೇ ಸಮಯದಲ್ಲಿ ತುರ್ತಾಗಿ ಸ್ಪಂದಿಸುವ ಕಾರ್ಯಪಡೆ ಕೂಡ ರಚನೆಯಾಗಿದೆ.
ಆಹಾರದ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ದೀಪವನ್ನು ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಾಧವ ಪೂಜಾರಿ,ರವಿ ಬಿಂದಾಸ್,ಉಪಸ್ಥಿತರಿದ್ದರು
ಸ್ವಾಗತಿಸಿದರು ಪತ್ರಕರ್ತ ರಾಕೇಶ್ ಕುಂಜೂರು ,ಮೂಳೂರು ಪುರುಷೋತ್ತಮ ಸಾಲಿಯಾನ್ ಪ್ರಸ್ತಾವಿಕ ಮಾತನಾಡಿ ನಿರೂಪಿಸಿ ವಂದಿಸಿದರು.


