ಬಾಗಲಕೋಟೆ : ಹಿಜಬ್ ತೆಗೆಯಲು ನಿರಾಕರಿಸಿ ಮನೆಗೆ ಹಿಂದಿರುಗಿದ ವಿದ್ಯಾರ್ಥಿನಿ – Vishwanews24
ಬಾಗಲಕೋಟೆ : ಹಿಜಬ್ ತೆಗೆಯಲು ನಿರಾಕರಿಸಿ ಮನೆಗೆ ಹಿಂದಿರುಗಿದ ವಿದ್ಯಾರ್ಥಿನಿ – Vishwanews24
ಬಾಗಲಕೋಟೆ: ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಿದ್ದು, ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ ಬಾಗಲಕೋಟೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಿಜಬ್ ತೆಗೆಯಲು ನಿರಾಕರಿಸಿ ಮನೆಗೆ ಹಿಂದಿರುಗಿದ್ದಾಳೆ.
ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಹಿಜಬ್ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು. ಈ ವೇಳೆ ಅನೇಕ ಮಂದಿ ವಿದ್ಯಾರ್ಥಿನಿಯರು ಹಿಜಬ್ ತೆರೆದಿಟ್ಟು, ಪರೀಕ್ಷಾ ಕೇಂದ್ರದ ಒಳಗೆ ಪರೀಕ್ಷೆ ಬರೆಯಲು ಹೋದರು. ಆದರೆ ವಿದ್ಯಾರ್ಥಿನಿಯೊಬ್ಬಳು ಮಾತ್ರ ಬುರ್ಕಾ ತೆಗೆಯಲು ಒಪ್ಪಲಿಲ್ಲ.
ಈ ವೇಳೆ ವಿದ್ಯಾರ್ಥಿನಿ ಮನವೊಲಿಸಲು ಶಿಕ್ಷಕರು ಪರೀಕ್ಷಾ ಸಿಬ್ಬಂದಿ ಯತ್ನಿಸಿದ್ದಾರೆ. ಆದರೂ ಹಿಜಬ್ ತೆಗೆಯಲು ಒಪ್ಪದ ವಿದ್ಯಾರ್ಥಿನಿ ಕೊನೆಗೆ ಪರೀಕ್ಷೆ ಬರೆಯದೇ ಪೋಷಕರ ಜೊತೆ ಮನೆಗೆ ತೆರಳಿದ್ದಾಳೆ.
