ಬಾರ್ಡರ್-ಗವಾಸ್ಕರ್ ಟ್ರೋಪಿ : ರಿಷಬ್ ಪಂತ್ ಅದ್ಭುತ ಆಟ : ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಬಾರ್ಡರ್-ಗವಾಸ್ಕರ್ ಟ್ರೋಪಿ : ರಿಷಬ್ ಪಂತ್ ಅದ್ಭುತ ಆಟ : ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ -Vishwanews24

ಬ್ರಿಸ್ಬೇನ್: ಬಾರ್ಡರ್ – ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಭರ್ಜರಿಯಾಗಿ ಜಯಗಳಿಸಿದೆ. 328 ರನ್​ಗಳ ಗುರಿ ಬೆನ್ನಟ್ಟಿದ ಭಾರತ ತಂಡ 5 ವಿಕೆಟ್​ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.

ರಿಷಬ್ ಪಂತ್ ಅದ್ಭುತವಾದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾವು ಮೂರು ವಿಕೆಟ್ ಗೆಲುವು ದಾಖಲಿಸಿಕೊಂಡಿದೆ.

ರಿಷಬ್ ಪಂತ್ 89 ರನ್ ಮಾಡಿ ಟೀಂ ಇಂಡಿಯಾವು 329 ರನ್ ಮಾಡಿ ಗೆಲುವು ದಾಖಲಿಸಿ 2-1ರಿಂದ ನಾಲ್ಕು ಪಂದ್ಯಗಳ ಸರಣಿಯನ್ನು ಗೆಲ್ಲಲು ನೆರವಾದರು.

4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

329 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಶುಭಮನ್ ಗಿಲ್ (91) ಹಾಗೂ ನಾಯಕ ಅಜಿಂಕ್ಯ ರಹಾನೆ (24) ರನ್, ಚೇತೇಶ್ವರ್ ಪೂಜಾರ್ (56) ರನ್ ಗಳಿಸಿದರೆ ಅಂತಿಮವಾಗಿ ರಿಷಬ್ ಪಂತ್ ಅಜೇಯ 89 ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ತಲುಪಿಸಿದರು.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 369 ರನ್ ಗಳಿಸಿದರೆ, 2 ನೇ ಇನ್ನಿಂಗ್ಸ್ 229 ರನ್ ಗಳಿಸಿತು. ಭಾರತ ಮೊದಲ ಇನ್ನಿಂಗ್ಸ್ 336 ರನ್ ಗಳಿಸಿದರೆ 2 ನೇ ಇನ್ನಿಂಗ್ಸ್ ಭಾರತ ಭರ್ಜರಿ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 329 ರನ್ ಗಳಿಸುವ ಮೂಲಕ 3 ವಿಕೆಟ್ ಗಳಿದ ರೋಚಕ ಗೆಲುವು ಸಾಧಿಸಿದೆ.

http://ಉಡುಪಿ: ಆನೆಗುಡ್ಡೆ ಶ್ರೀ ವಿನಾಯಕ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ -Vishwanews24