ಬಿಜೆಪಿ ಆಡಳಿತಾವಧಿಯ ಎಲ್ಲಾ ಹಗರಣಗಳ ಮರು ತನಿಖೆ : ಎಂ.ಬಿ.ಪಾಟೀಲ್ – Vishwanews24

Featured, ರಾಜ್ಯ ನ್ಯೂಸ್

ಬಿಜೆಪಿ ಆಡಳಿತಾವಧಿಯ ಎಲ್ಲಾ ಹಗರಣಗಳ ಮರು ತನಿಖೆ : ಎಂ.ಬಿ.ಪಾಟೀಲ್ 

ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಕೇಳಿ ಬಂದಿದ್ದ ಎಲ್ಲಾ ಹಗರಣಗಳನ್ನು ಮರು ತನಿಖೆ ನಡೆಸಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಅವರು  ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರದಲ್ಲಿ ಕೇಳಿಬಂದಿದ್ದ ಪಿಎಸ್‌ಐ ಹಗರಣ, ಗುತ್ತಿಗೆದಾರರ ಮೇಲೆ ಲಂಚದ ಒತ್ತಡ ಮುಂತಾದ ಹಲವಾರು ಆರೋಪಗಳನ್ನು ಮರುತನಿಖೆಗೆ ನಡೆಸಲಾಗುವುದು ಎಂದು ಹೇಳಿದರು.

ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಹಳೆಯ ಪ್ರಕರಣಗಳ ತನಿಖೆ ನಡೆಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದರು. ಇದರಂತೆ ಬಿಜೆಪಿ ಸರ್ಕಾರದ ಎಲ್ಲಾ ಹಗರಣಗಳನ್ನು ಮರು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯ ಹಂಗಾಮಿ ಸ್ವೀಕರ್ ಆಗಿ ಆರ್ ವಿ ದೇಶಪಾಂಡೆ ಪ್ರಮಾಣವಚನ ಸ್ವೀಕಾರ – Vishwanews24

Leave a Reply