ಬಿಪಿಎಲ್ ಕಾರ್ಡ್ ಇದ್ದರೆ 3 ತಿಂಗಳು ವಿದ್ಯುತ್ ಬಿಲ್ ಮನ್ನಾ’; ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ : ಸ್ಪಷ್ಟನೆ ನೀಡಿದ ಮೆಸ್ಕಾಂ -Vishwanews24
‘ಬಿಪಿಎಲ್ ಕಾರ್ಡ್ ಇದ್ದರೆ 3 ತಿಂಗಳು ವಿದ್ಯುತ್ ಬಿಲ್ ಮನ್ನಾ’; ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ : ಸ್ಪಷ್ಟನೆ ನೀಡಿದ ಮೆಸ್ಕಾಂ -Vishwanews24
ಮoಗಳೂರು, : ‘ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳು ಮೆಸ್ಕಾಂ ಬಿಲ್ ಮನ್ನಾ ಮಾಡಲಾಗುತ್ತದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಆದರೆ ಇದು ಸುಳ್ಳು ಸುದ್ದಿ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.
‘ಬಿಪಿಎಲ್ ಕಾರ್ಡ್ ಇದ್ದವರಿಗೆ ಸರಕಾರದಿಂದ ಮೆಸ್ಕಾಂ ಕಂಪನಿ ಮೂರು ತಿಂಗಳ ಕರೆಂಟ್ ಬಿಲ್ ಮನ್ನಾ ಮಾಡಿದೆ. ಆಧಾರ್ ಕಾರ್ಡ್ ಮತ್ತು ಕರೆಂಟ್ ಬಿಲ್ಲಿನ ಪ್ರತಿ ಮತ್ತು ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಹತ್ತಿರದ ಮೆಸ್ಕಾಂ ಇಲಾಖೆಗೆ ಸಲ್ಲಿಸಬೇಕು’ ಎಂದು ಪ್ರಕಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಮೆಸ್ಕಾಂ ಸಾರ್ವಜನಿಕ ಸಂಪರ್ಕ ಅಧಿಕಾರಿ ವಸಂತ್ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಮೆಸ್ಕಾಂ ಕಚೇರಿಯಿಂದ ಈ ರೀತಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಯಾವುದೇ ಬಿಲ್ ಮನ್ನಾ ಮಾಡಿ ಆದೇಶ ಹೊರಡಿಸಿಲ್ಲ’ ಎಂದು ಅವರು ತಿಳಿಸಿದ್ದಾರೆ.

