ಬೃಹ್ಮಗಿರಿ ದುರಂತ : ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಮೃತದೇಹ ಪತ್ತೆ -Vishwanews24
ಮಡಿಕೇರಿ: ಬೆಟ್ಟ ಕುಸಿತದಿಂದ ಕಣ್ಮರೆಯಾಗಿದ್ದ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ (80) ಅವರ ಮೃತದೇಹವು ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ. ಸ್ಥಳೀಯ ಪೊಲೀಸರು, ನಾರಾಯಣ ಆಚಾರ್ ಅವರದ್ದೇ ಮೃತದೇಹ ಎಂದು ಗುರುತಿಸಿದ್ದಾರೆ.
ಮನೆ ಕೊಚ್ಚಿ ಹೋಗಿದ್ದ ಸ್ಥಳದಿಂದ ದೂರದ ಪ್ರತಾಪದಲ್ಲಿ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಗಸ್ಟ್ 8ರಂದು ನಾರಾಯಣ ಆಚಾರ್ ಅವರ ಅಣ್ಣ ಆನಂದ ತೀರ್ಥ ಅವರ ಮೃತದೇಹ ಪತ್ತೆಯಾಗಿತ್ತು. ರವಿ ಕಿರಣ್ ಭಟ್, ಶ್ರೀನಿವಾಸ್ ಹಾಗೂ ಶಾಂತ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನಾರಾಯಣ ಆಚಾರ್ ಪುತ್ರಿಯರಾದ ನಮಿತಾ, ಶರದಾ ಹಾಗೂ ಮೊಮ್ಮಕ್ಕಳು ಸ್ಥಳದಲ್ಲಿದ್ದಾರೆ.
