ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೌಲಭ್ಯ ; ಪ್ರಯಾಣದ ವಿವರ ಹೀಗಿದೆ – vishwanews24

Featured, ರಾಜ್ಯ ನ್ಯೂಸ್

ಶಬರಿಮಲೆ ಯಾತ್ರಾರ್ಥಿಗಳಿಗೆ ಶುಭ ಸುದ್ದಿ : ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೌಲಭ್ಯ

ಬೆಂಗಳೂರು : ಶಬರಿಮಲೆ ಯಾತ್ರಾರ್ಥಿಗಳಿಗೆ ಕೆಎಸ್ ಆರ್ ಟಿಸಿ ಸಿಹಿಸುದ್ದಿ ನೀಡಿದ್ದು, ಕೆಎಸ್ಆರ್ಟಿಸಿಯು ಬೆಂಗಳೂರು ಮತ್ತು ಕೇರಳದ ಪಂಪಾ ನಡುವೆ ಐರಾವತ ವೋಲ್ವೊ ಬಸ್ ಸೇವೆ ಆರಂಭಿಸಿದೆ.

ಶಾಂತಿ ನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ವೋಲ್ವೊ ಬಸ್ ಹೊರಡಲಿದೆ. ಮೈಸೂರು ರಸ್ತೆ ಸ್ಯಾಟ್ಲೈಟ್ ಬಸ್ ನಿಲ್ದಾಣದಿಂದ 2.20ಕ್ಕೆ ಹೊರಟು ಸಂಜೆ 5.10ಕ್ಕೆ ಮೈಸೂರು ತಲುಪಲಿದೆ. ಮರುದಿನ ಬೆಳಗ್ಗೆ 6.45ಕ್ಕೆ ನಿಲಕ್ಕಲ್ ಬಸ್ ನಿಲ್ದಾಣವನ್ನು ತಲುಪಲಿದೆ.

ದತ್ತಜಯಂತಿ : ಡಿ.11 ರಿಂದ 14ರ ವರೆಗೆ ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ನಿಷೇಧ – vishwanews24

ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶ ನೀಡಲಾಗಿದ್ದು, ಬರುವಾಗ ನಿಲಕ್ಕಲ್ ಬಸ್ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಪ್ರತಿದಿನ ಸಂಜೆ 6ಕ್ಕೆ ನಿಲಕ್ಕಲ್ನಿಂದ ವೋಲ್ವೊ ಬಸ್ ಹೊರಡಲಿದ್ದು, ಮರುದಿನ ಬೆಳಗ್ಗೆ 10ಕ್ಕೆ ಮೆಜೆಸ್ಟಿಕ್ ತಲುಪಲಿದೆ. ನಿಮ್ಮ ಹತ್ತಿರದ ಖಾಸಗಿ ಟಿಕೆಟ್ ಕೌಂಟರ್ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕ್ಕಿಂಗ್ ಕೌಂಟರ್ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು. ವೆಬ್ಸೈಟ್  https://www.ksrtc.in/   ಟಿಕೆಟ್ ಬುಕ್ಕಿಂಗ್ ಮಾಡಬಹುದು.

ವೋಲ್ವೋ ಪ್ರಯಾಣ ವಿವರ:

ಮಧ್ಯಾಹ್ನ 1:50ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಸಂಜೆ 5:10ಕ್ಕೆ ಮೈಸೂರು ತಲುಪಿ ಮರುದಿನ ಬೆಳಿಗ್ಗೆ 6:45ಕ್ಕೆ ನಿಲಕ್ಕಲ್ ತಲುಪಲಿದೆ. ಅದೇ ದಿನ ಸಂಜೆ 6:00 ಗಂಟೆಗೆ ಬಸ್ ನಿಲಕ್ಕಲ್ ನಿಂದ ಹೊರಟು ಮರುದಿನ ಬೆಳಿಗ್ಗೆ 10:00 ಗಂಟೆಗೆ ಮೆಜೆಸ್ಟಿಕ್ ತಲುಪಲಿದೆ. ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶವನ್ನು ಸಹ ನೀಡಲಾಗಿದೆ. ಭಕ್ತಾದಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಕಾರ್ಕಳ: ಗ್ಯಾಂಗ್‌ರೇಪ್ ಪ್ರಕರಣ ; ಮುಖ್ಯ ಆರೋಪಿ ಅಲ್ತಾಫ್‌ಗೆ ಜಾಮೀನು ಮಂಜೂರು – vishwanews24

 

Leave a Reply