ಬೆಂಗಳೂರು : ಇ- ಮೇಲ್ ಮೂಲಕ ನಾಲ್ಕು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ : ಶಾಲೆಗಳಲ್ಲಿ ಆತಂಕ ; ಪೊಲೀಸರಿಂದ ಶೋಧ – Vishwanews24 \
ಬೆಂಗಳೂರು : ಇ- ಮೇಲ್ ಮೂಲಕ ನಾಲ್ಕು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ : ಶಾಲೆಗಳಲ್ಲಿ ಆತಂಕ ; ಪೊಲೀಸರಿಂದ ಶೋಧ – Vishwanews24
ಬೆಂಗಳೂರು: ಬೆಂಗಳೂರಿನ ನಾಲ್ಕು ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಅನಾಮಿಕ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.
ಶುಕ್ರವಾರ ಬೆಳಿಗ್ಗೆ 10-25 ರ ಹೊತ್ತಿಗೆ ಬೆಂಗಳೂರು ನಗರದ ನಾಲ್ಕು ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ‘ನಿಮ್ಮ ಶಾಲೆಯಲ್ಲಿ ಶಕ್ತಿಶಾಲಿ ಬಾಂಬ್ ಇರಿಸಲಾಗಿದ್ದು. ಎಚ್ಚರಿಕೆ ವಹಿಸುವುದು ನಿಮ್ಮ ಕರ್ತವ್ಯ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಎಂದು’ ಎಂದು ಇ ಮೇಲ್‌ಲ್ಲಿ ಹೇಳಲಾಗಿದೆ.


ನಗರದ ಹೆಬ್ಬಗೋಡಿ, ಮಹದೇವಪುರ, ಹೆಣ್ಣೂರು, ಹುಸ್ಕೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಕೂಡಲೇ ಶಾಲೆಗೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ದೌಡಾಯಿಸಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.

ಹಿಂದೂಗಳು, ಹಿಂದೂಗಳ ವಾಹನದಲ್ಲೇ ದೇವಾಲಯಕ್ಕೆ ಹೋಗಬೇಕು : ಹೊಸ ಅಭಿಯಾನ – Vishwanews24
