Featured

ಸ್ಟಿಂಗ್ ಆಪರೇಷನ್’ ಪ್ರಕರಣ :  ಕಾಂಗ್ರೆಸ್ ನಿಂದ ಕೃಪಾ ಆಳ್ವಾ ಉಚ್ಛಾಟನೆ – vishwanews24

ಸ್ಟಿಂಗ್ ಆಪರೇಷನ್’ ಪ್ರಕರಣ :  ಕಾಂಗ್ರೆಸ್ ನಿಂದ ಕೃಪಾ ಆಳ್ವಾ ಉಚ್ಛಾಟನೆ

ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ “ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವಾ ಅವರನ್ನು ಕಾಂಗ್ರೆಸ್ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.

ಉದ್ದೇಶಿತ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೃಪಾ ಆಳ್ವಾ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಹಾಗೂ ಅವರ ನಡವಳಿಕೆ ಪಕ್ಷ ವಿರೋಧಿ ಚಟುವಟಿಕೆ ಯಾಗಿದೆ ಎಂದು ಪಕ್ಷ ನೇರವಾಗಿ ಹೇಳಿದೆ. ಅಷ್ಟೇ ಅಲ್ಲದೆ, ಇದಕ್ಕೆ ಈ ಹಿಂದೆಯೇ ಕಾರಣ ಕೇಳಿ ನೋಟಿಸ್ ನೀಡಿದಾಗ್ಯೂ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಮುಂದಿನ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದಲ್ಲಿ ಸ್ವಪಕ್ಷದವರ ಕೈವಾಡವಿದೆ ಎಂದು ಸ್ವತಃ ದೂರುದಾರ ಸಿದ್ದರಾಮಯ್ಯನವರ ಪುತ್ರ ಸಚಿವ ಯತೀಂದ್ರ ಅವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ಸ್ವತಃ ಸಿದ್ದರಾಮಯ್ಯನವರೇ ಕೃಪಾ ಆಳ್ವಾ ಅವರ ಹೆಸರನ್ನು ಹೇಳಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪ್ರಕರಣ ಸಂಬಂಧ ಮಹತ್ವದ ಚರ್ಚೆ ಮಾಡಿದ್ದರು.

ಈ ನಡುವೆ ಸಿದ್ದರಾಮಯ್ಯ, ದೆಹಲಿಯಲ್ಲಿ “ಇಂಡಿಯಾ ಒಕ್ಕೂಟ’ ಹಮ್ಮಿಕೊಂಡ ಮತ ಉಳಿಸಿ-ದೇಶ ಉಳಿಸಿ ಅಭಿಯಾನದಲ್ಲಿ ಭಾಗವಹಿಸಲು ಹೊರಟಿದ್ದಾರೆ. ಈ ವೇಳೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ದೂರು ಸಲ್ಲಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕೃಪಾ ಆಳ್ವಾ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಂಡಿದೆ. ಈ ಕ್ರಮವು ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಅವರ ಆರೋಪಕ್ಕೆ ಪುಷ್ಟಿ ನೀಡಿದಂತಿದೆ.

Vishwa News 24

Recent Posts

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು  – vishwanews24

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು ; ಮತ್ತಿಬ್ಬರಿಗೆ ಗಂಭೀರ ಗಾಯ ಬೆಂಗಳೂರು: ಖಾಸಗಿ ಹೋಟೆಲ್​​ನ…

26 minutes ago

ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು – vishwanews24

ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು ಮೂಡುಬಿದಿರೆ : ಖಾಸಗಿ ಬಸ್ ವೊಂದು ದ್ವಿಚಕ್ರ…

37 minutes ago

ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ – vishwanews24

ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ ಸುರತ್ಕಲ್: ಬೆಂಗಳೂರು-ಕಾರವಾರ ನಡುವೆ ಸಂಚರಿಸಲಿರುವ ಹೊಸ ವಂದೇ…

42 minutes ago

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್‍ ಕುಮಾರ್ – vishwanews24

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್‍ ಕುಮಾರ್ ಬೆಂಗಳೂರು: ಯುವ ಸಮುದಾಯಕ್ಕೆ ಎಸ್‍ಐಆರ್ ಕುರಿತಂತೆ…

55 minutes ago

ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ದೀಪಾವಳಿ ಪಟಾಕಿ ಸಿಡಿಸಲು ಅವಕಾಶ : ಸಚಿವ ರಾಮಲಿಂಗಾರೆಡ್ಡಿ – vishwanews24

ಈ ಬಾರಿ ದೀಪಾವಳಿ ಪಟಾಕಿ ಸಿಡಿಸಲು 2 ಗಂಟೆ ಅವಕಾಶ: ನಿಯಮ ಮೀರಿದರೆ ಕಠಿಣ ಕ್ರಮ ಎಂದ ಸಚಿವ ರಾಮಲಿಂಗಾರೆಡ್ಡಿ…

1 hour ago

ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್‌ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ – vishwanews24

ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್‌ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ ಮಣಿಪಾಲ: ರಾಷ್ಟ್ರೀಯ ಹೆದ್ದಾರಿಯಲ್ಲಿ…

2 hours ago