ಬೆಂಗಳೂರು : ಜಿಮ್ನಲ್ಲಿ ಮಹಿಳೆ ಕುಸಿದು ಬಿದ್ದುಸಾವು ಪ್ರಕರಣ ; ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಬಯಲು – Vishwanews24
ಜಿಮ್ನಲ್ಲಿ ಮಹಿಳೆ ಕುಸಿದು ಬಿದ್ದುಸಾವು ಪ್ರಕರಣ ; ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಬಯಲು
ಮೆದುಳಿನ ರಕ್ತನಾಳ ಛಿದ್ರಗೊಂಡು ಸಾವು..
ಬೆಂಗಳೂರು: ಜಿಮ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಸಾವಿಗೆ ಕಾರಣ ಬಯಲಾಗಿದೆ.
ಮೃತ ದುರ್ದೈವಿ ವಿನಯಾ ಕುಮಾರಿ(47) ಮೆದುಳಿನ ರಕ್ತನಾಳ ಸಿಡಿದು ಕೋಮಾ ತಲುಪಿ ಸಾವನ್ನಪ್ಪಿದ್ದಾರೆ ಅಂತ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಮಲ್ಲೇಶ್ ಪಾಳ್ಯದಲ್ಲಿ ಕಳೆದ ಮಾರ್ಚ್ 27ರಂದು ಜಿಮ್ ಮಾಡುತ್ತಲೇ ಕುಸಿದು ಬಿದ್ದು ವಿನಯಾ ಸಾವನ್ನಪ್ಪಿದ್ದರು.

ವಿನಯಾ ಅವರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಮಾರ್ಚ್ 27ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದರು. ತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು.
ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಾಸನ : ಮಾವಿನ ಹಣ್ಣು ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ; ಹಿಂದೂ ಕಾರ್ಯಕರ್ತರ ಮತ್ತೊಂದು ಅಭಿಯಾನ – Vishwanews24
