Featured

ಬೆಂಗಳೂರು : ಬರೋಬ್ಬರಿ 39 ಕೋಟಿ ರೂ. ತೆರಿಗೆ ಬಾಕಿ : ಬಿಬಿಎಂಪಿಯಿಂದ ಮಂತ್ರಿ ಮಾಲ್‍ಗೆ ಬೀಗ -Vishwanews24

ಬೆಂಗಳೂರು : 39 ಕೋಟಿ ರೂ. ತೆರಿಗೆ ಬಾಕಿ ಹಿನ್ನೆಲೆ : ಬಿಬಿಎಂಪಿಯಿಂದ ಮಂತ್ರಿ ಮಾಲ್‍ಗೆ ಬೀಗ -Vishwanews24

ಬೆಂಗಳೂರು: ಬರೋಬ್ಬರಿ 39 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಬಿಬಿಎಂಪಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‍ಗೆ ಬೀಗ ಹಾಕಿದೆ. ತೆರಿಗೆ ಕಟ್ಟುವವರೆಗೆ ಮಾಲ್ ಓಪನ್ ಮಾಡಲು ಬಿಡುವುದಿಲ್ಲ ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.

ಕಳೆದ ಮೂರು ವರ್ಷಗಳಿಂದ ಮಂತ್ರಿ ಮಾಲ್ ತೆರಿಗೆ ಕಟ್ಟಿಲ್ಲ, ಬಡ್ಡಿ ಸೇರಿ ಒಟ್ಟು 39 ಕೋಟಿ ರೂ. ತೆರಿಗೆ ಬಾಕಿ ಉಳಿದಿದೆ. ಇಂದು ಪಾಲಿಕೆ ಅಧಿಕಾರಿಗಳು ವಸೂಲಿಗೆ ತೆರಳಿದ್ದರು. ಈ ವೇಳೆ ಸಹ ತೆರಿಗೆ ಕಟ್ಟಿಲ್ಲ. ಹೀಗಾಗಿ ಬೀಗ ಜಡಿಯಲಾಗಿದೆ ಎಂದು ಮಲ್ಲೇಶ್ವರ ಪಶ್ವಿಮ ಡಿಸಿ ಪ್ರಸನ್ನ ಕುಮಾರ್  ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಾದಕ ವಸ್ತು ಮಾರಾಟ : ಬಾಲಿವುಡ್ ಸೇರಿ ಹಲವಾರು ಚಿತ್ರದಲ್ಲಿ ನಟಿಸಿದ್ದ ನೈಜೀರಿಯನ್ ನಟನ ಬಂಧನ -Vishwanews24

ಎಷ್ಟೇ ನೋಟಿಸ್ ನೀಡಿದರೂ ಮಂತ್ರಿ ಮಾಲ್ ಮಾತ್ರ ಬುದ್ಧಿ ಕಲಿತಿಲ್ಲ. ಪ್ರತಿಷ್ಟಿತ ಮಂತ್ರಿ ಮಾಲ್ 39 ಕೋಟಿ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಬಾಕಿ ಪಾವತಿಸುವಂತೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿದ್ದರು. 2017ರಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಬಾಕಿ ಹಿನ್ನೆಲೆ ಮಂತ್ರಿ ಮಾಲ್ ಗೆ ಬೀಗ ಹಾಕಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಂತ್ರಿ ಮಾಲ್ ಗೆ ಬೀಗ ಹಾಕಲಾಗಿತ್ತು. ಬಳಿಕ 5 ಕೋಟಿ ರೂ. ಪಾವತಿ, ಉಳಿದ ಹಣವನ್ನು ಅಕ್ಟೋಬರ್ ಅಂತ್ಯದ ವೇಳೆ ಕಟ್ಟುವುದಾಗಿ ಭರವಸೆ ನೀಡಿದ್ದರಿಂದ ಬೀಗ ತೆರವುಗೊಳಿಸಲಾಗಿದೆ.

ಆಸ್ತಿ ತೆರಿಗೆ ಪಾವತಿಸುವವರೆಗೂ ಮಂತ್ರಿ ಮಾಲ್‌ಗೆ ಬೀಗ ಮುಂದುವರಿಯಲಿದೆ. ಈ ಮಧ್ಯೆ, ಆಸ್ತಿ ತೆರಿಗೆ ಪಾವತಿಸಲು ಮಂತ್ರಿ ಮಾಲ್‌ ನೀಡಿದ್ದ ಚೆಕ್ ಬೌನ್ಸ್ ಅಗಿದೆ. ಮಂತ್ರಿ ಮಾಲ್‌ನವರು ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಹಾಗಾಗಿ ಇವತ್ತು ಡಿಡಿ ಮುಖಾಂತರ ಪಾವತಿ ಮಾಡಬೇಕಾಗಿದೆ.

ಬಿಬಿಎಂಪಿ (BBMP) ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್​ ಮೊದಲ ಸ್ಥಾನದಲ್ಲಿದೆ. ಮಲ್ಲೇಶ್ವರಕ್ಕೆ ಸ್ವಾಗತ ಕೋರುವಂತೆ ಸಂಪಿಗೆ ರಸ್ತೆಯ ಆರಂಭದಲ್ಲಿರುವ ಮಂತ್ರಿ ಮಾಲ್ (Mantri Square Mall ) ಬರೋಬ್ಬರಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ : ಬಹುದಿನಗಳ ಕನಸು ನನಸು : ಕೇರಳದ ಮುಸ್ಲಿಂ ಯುವತಿಯಿಂದ ದೇವಸ್ಥಾನಕ್ಕೆ ಶ್ರೀಕೃಷ್ಣನ ಚಿತ್ರ ಉಡುಗೊರೆ -Vishwanews24

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

23 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

1 day ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

1 day ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

1 day ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago