ಕಾರ್ಕಳ: ಇಲ್ಲಿನ ಜೈ ತುಳುನಾಡ್ ಸಂಘಟನೆಯ ಘಟಕದ ವತಿಯಿಂದ ನಗರದಲ್ಲಿ ಅಂಗಡಿ, ಹೋಟೆಲ್, ದೇವಸ್ಥಾನದ ನಾಮಫಲಕಗಳಲ್ಲಿ, ಖಾಸಗಿ ಬಸ್ ಮತ್ತು ವಾಹನಗಳಲ್ಲಿ ತುಳು ಲಿಪಿ ನಾಮಫಲಕ ಅಳವಡಿಸುವಂತೆ ಮನವಿ ಮಾಡಲಾಯಿತು.
ಜೈ ತುಳುನಾಡ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ ಪ್ರತಿಕ್ರಿಯಿಸಿ, ‘ಅ.10ರಂದು ತುಳುಲಿಪಿ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಅಭಿಯಾನಕ್ಕೆ ತಾಲ್ಲೂಕು ಬಸ್ ಚಾಲಕರ ಮಾಲೀಕರ ಸಂಘ, ಅಂಗಡಿ, ಕಟ್ಟಡ ಮಾಲಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತುಳು ಲಿಪಿಗೆ ಬೆಂಬಲ ನೀಡುವುದಾಗಿ ಎಲ್ಲರೂ ಭರವಸೆ ನೀಡಿದ್ದಾರೆ’ ಎಂದರು.
ಈ ಅಭಿಯಾನದದಲ್ಲಿ ಜೈ ತುಳುನಾಡ್‌ನ ಪ್ರಧಾನ ಸಂಘಟನಾ ಕಾರ್ಯದರ್ಶಿ ರವಿಚಂದ್ರ ಕಾರ್ಲ, ಕಾರ್ಲ ಯುನಿಟ್‌ನ ಸಂಚಾಲಕ ವಿಶು ಶ್ರೀಕೇರ, ಶೇಖರ್ ಶ್ರೀಗಂಗೆ, ಸದಸ್ಯರಾದ ಅರುಣ್ ಪಳ್ಳಿ, ಪ್ರಶಾಂತ್ ನಂದೊಲಿಗೆ, ಲಿಖಿತ್ ಕಾರ್ಲ, ಕಿಶೋರ್ ಮುಂಡ್ಲಿ, ಪ್ರೀತಮ್ ಮಾಳ ಮತ್ತು ಇನ್ನಿತರರು ಭಾಗವಹಿಸಿದ್ದರು.
ಇದನ್ನೂ ಓದಿ : ಬೆಂಗಳೂರು : ಬರೋಬ್ಬರಿ 39 ಕೋಟಿ ರೂ. ತೆರಿಗೆ ಬಾಕಿ : ಬಿಬಿಎಂಪಿಯಿಂದ ಮಂತ್ರಿ ಮಾಲ್‍ಗೆ ಬೀಗ -Vishwanews24
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…