ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ – vishwanews24
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಬೆಂಗಳೂರು: ಬಡ್ಡಿ ಹಣಕ್ಕಾಗಿ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆಗೈದ ಘಟನೆ ಬೆಂಗಳೂರಿನ ಕಾಕ್ಸ್‌ಟೌನ್ ದೊಡ್ಡಗುಂಟೆ ಬಳಿ ನಡೆದಿದೆ.
ಅಜಿತ್ (35) ಕೊಲೆಯಾದ ವ್ಯಕ್ತಿ. ಅಜಿತ್ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ಸಂದರ್ಭ ಮನೆ ಮುಂಭಾಗದಲ್ಲೇ ಕೊಲೆ ಮಾಡಲಾಗಿದೆ.
ಬಡ್ಡಿ ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಜಿತ್ ವ್ಯಕ್ತಿಯೊಬ್ಬರಿಂದ ಅಧಿಕ ಬಡ್ಡಿಗೆ ಹಣ ಪಡೆದಿದ್ದರು. ಬಡ್ಡಿ ಹಣ ಮತ್ತು ಅಸಲು ಹಣ ವಾಪಸ್ ವಿಚಾರಕ್ಕೆ ಆರೋಪಿ ಮತ್ತು ಅಜಿತ್ ನಡುವೆ ಗಲಾಟೆ ಆಗುತ್ತಿತ್ತು. ಇಂದು ಅಜಿತ್ ಮನೆಗೆ ಬರೋದನ್ನೇ ಕಾದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಿಂದ ಬಂದು ಆರೋಪಿ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪುಲಿಕೇಶಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಸಂವಿಧಾನದಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್ – vishwanews24
