ಬೆಳ್ತಂಗಡಿ : ಆತ್ಮಹತ್ಯೆ ಮಾಡಿಕೊಳ್ಳುತ್ತಿದೇನೆ ಎಂದು ಗೆಳೆಯರಿಗೆ ಕರೆ ಮಾಡಿ ಹೇಳಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಗುರುವಾಯನಕೆರೆಯಲ್ಲಿ ಪತ್ತೆ – Vishwanews24

Featured, ದಕ್ಷಿಣ ಕನ್ನಡ

ಆತ್ಮಹತ್ಯೆ ಮಾಡಿಕೊಳ್ಳುತ್ತಿದೇನೆ ಎಂದು ಗೆಳೆಯರಿಗೆ ಕರೆ ಮಾಡಿ ಹೇಳಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಗುರುವಾಯನಕೆರೆಯಲ್ಲಿ ಪತ್ತೆ

ಬೆಳ್ತಂಗಡಿ : ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದೇನೆ ಎಂದು ಗೆಳೆಯರಿಗೆ ಕರೆ ಮಾಡಿ ಹೇಳಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಗುರುವಾಯನಕೆರೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ಸ್ಥಳೀಯ ಆಟೊ ರಿಕ್ಷಾ ಡ್ರೈವರ್ ಪ್ರವೀಣ್ ಎಂದು ಗುರುತಿಸಲಾಗಿದ್ದು, ಇವರು ಇಂದು ಮುಂಜಾನೆ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆ ಕೂಡಲೇ ಸ್ನೇಹಿತರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದಾಗ ಗುರುವಾಯನಕೆರೆಯ ಕೆರೆಯ ಬಳಿ ಪ್ರವೀಣ್ ರಿಗೆ ಸೇರಿದ ಕೆಲವು ದಾಖಲೆಗಳು ಪತ್ತೆಯಾಗಿದ್ದವು. ಇದರಿಂದಾಗಿ ಕೆರೆಗೆ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು.

ಹೊಸ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ – Vishwanews24

ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಬೆಳಾಲು ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರು ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಮಧ್ಯಾಹ್ನ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಶವಾಗಾರಕ್ಕೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಕಾರಣ ತಿಳಿದುಬಂದಿಲ್ಲ. ಒಟ್ಟು ಘಟನೆಯ ಬಗ್ಗೆ ಹಲವಾರು ಅನುಮಾನಗಳಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply