ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನ ಮಂತ್ರಿ, ವಿಪಕ್ಷಗಳು ಟೀಕಿಸಿದ್ದರು. ಈಗ ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ. ವಿಶ್ವದ ಅನೇಕ ದೇಶಗಳು ಒಪ್ಪಿಕೊಂಡಿವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಮ್ಮ ನೇತೃತ್ವದ ಸರ್ಕಾರದ 100 ದಿನಗಳ ಆಡಳಿತ ಶತದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನರ ಜೀವನಕ್ಕೆ ಗ್ಯಾರಂಟಿಗೆ 1,45,416 ಕೋಟಿ ಹಣ ಕೊಡಲಾಗಿದೆ. ಜಗತ್ತಿನ ಅತಿ ದೊಡ್ಡ ಯೋಜನೆ. ಗ್ಯಾರಂಟಿ ಮಾಡಲು ಆಗೊಲ್ಲ ಅಂದ್ರು. ನಾವು ಸಾಧನೆ ಮಾಡಿದ್ದೇವೆ. ಜನರಿಗೆ ಗ್ಯಾರಂಟಿ ಕೊಟ್ಟಿದ್ದೇವೆ. ಗೃಹಲಕ್ಷ್ಮಿಯಿಂದ 1.24 ಕೋಟಿ ಮಹಿಳೆಯರಿಗೆ ಹಣ ಸಿಕ್ಕಿದೆ. ಪ್ರತಿ ಮಹಿಳೆಗೆ 66,000 ಹಣ ಸಿಕ್ಕಿದೆ. ಗೃಹಜ್ಯೋತಿ ಸೌಲಭ್ಯವನ್ನು 1.67 ಕೋಟಿ ಜನರಿಗೆ ಕೊಡಲಾಗಿದೆ. 30,522 ಕೋಟಿ ಖರ್ಚು ಮಾಡಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ” ಎಂದು ಹೇಳಿದರು.
“ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು 4.44 ಕೋಟಿ ಜನರಿಗೆ ಕೊಡಲಾಗಿದೆ. ಅದಕ್ಕಾಗಿ 21,054 ಕೋಟಿ ಖರ್ಚು ಮಾಡಲಾಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟು ಹಸಿವು ಮುಕ್ತ ರಾಜ್ಯ ಮಾಡಿದ್ದೇವೆ. ಶಕ್ತಿ ಯೋಜನೆಯಿಂದ 821 ಕೋಟಿ ಫ್ರೀ ಬಸ್ ಟ್ರಿಪ್ ಮಾಡಲಾಗಿದೆ. 15,735 ಕೋಟಿ ರೂ. ಖರ್ಚು ಮಾಡಲಾಗಿದೆ. ಕ್ಯಾಬಿನೆಟ್‌ನಲ್ಲಿ ಶಕ್ತಿಗೆ ಸ್ಮಾರ್ಟ್ ಕೊಡುವ ನಿರ್ಧಾರ ಮಾಡಲಾಗಿದೆ. 3.72 ಲಕ್ಷ ಯುವಕರಿಗೆ ಯುವನಿಧಿ ಯೋಜನೆ ಕೊಡಲಾಗಿದೆ. 1154 ಕೋಟಿ ಖರ್ಚು ಮಾಡಲಾಗಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗ ರಾಷ್ಟ್ರಗೀತೆಯಿಂದ ಹಿಡಿದು ಅನೇಕ ಕೆಲಸ ಮಾಡಿದೆ. ಇದನ್ನ ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ” ಎಂದರು.
“ಗ್ಯಾರಂಟಿ ಜಾರಿ ಮಾಡಲು ಆಗೊಲ್ಲ ಅಂತ ಪ್ರಧಾನಿ, ವಿಪಕ್ಷಗಳು ಹೇಳಿದರು. ಈಗ ಕರ್ನಾಟಕದ ಮಾಡೆಲ್ ಎಲ್ಲೆಲ್ಲೂ ಇದೆ. ವಿಶ್ವದ ಅನೇಕ ದೇಶಗಳು ಒಪ್ಪಿವೆ. 25,652 ಕೋಟಿ ಶೂನ್ಯಬಡ್ಡಿಯಲ್ಲಿ ರೈತರಿಗೆ ಕೊಡಲಾಗಿದೆ. ನೀರಾವರಿ ಯೋಜನೆಗೆ 17,000 ಕೋಟಿ ನೀಡಲಾಗಿದೆ. 121 ಪ್ರಾಜೆಕ್ಟ್ ಮಾಡಲಾಗಿದೆ. 5,000 ಕೋಟಿ ಕೆಕೆಆರ್‌ಡಿಬಿಗೆ ಕೊಡಲಾಗಿದೆ” ಎಂದು ಮಾಹಿತಿ ನೀಡಿದರು.
“ಗೃಹ ಆರೋಗ್ಯದಡಿ ಮನೆ ಮನೆಯಲ್ಲಿ 88 ಲಕ್ಷ ಮಂದಿ ತಪಾಸಣೆ ಆಗಿದೆ. ಹೃದಯ ಜ್ಯೋತಿ 21,658 ಸಾವಿರ ಕೇಸ್ ನೋಡಿದ್ದೇವೆ. 6 ದಿನ ಮಕ್ಕಳಿಗೆ ಮೊಟ್ಟೆ ಕೊಡಲಾಗ್ತಿದೆ. 2023 ರಿಂದ 2.53 ಲಕ್ಷ ಕೋಟಿ ಬಂಡವಾಳ ಹೂಡಿಕೆ ಬಂದಿದೆ. ಎಫ್‌ಡಿಐನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. 6 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. ನಮ್ಮ ಸರ್ಕಾರ ಬಂದ ಮೇಲೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. 10,000 ಭಾರತ್ ಜೋಡೊ ಸಂಘ ಸ್ಥಾಪನೆ ಮಾಡಲಾಗಿದೆ. 2400 ಚದರ ಅಡಿ ಮತ್ತು ಅದಕ್ಕಿಂತ ವಿಸ್ತೀರ್ಣ ಮನೆಗೆ ಒಸಿ-ಸಿಸಿ ನೀಡಲಾಗಿದೆ. ಬೆಂಗಳೂರು ರಸ್ತೆ ಅಭಿವೃದ್ಧಿಗೆ 2,000 ಕೋಟಿ. ಬಿ ಖಾತೆಯಿಂದ ಎ ಖಾತಾ ನೀಡುತ್ತಿದ್ದೇವೆ. ವಿಶೇಷ ರೌಡಿ ನಿಗ್ರಹ ದಳ ಸ್ಥಾಪನೆ ಮಾಡಲಾಗಿದೆ” ಎಂದು ವಿವರಿಸಿದರು.
ಯುದ್ಧ ಆರಂಭವಾಗಿದೆ, ರಣರಂಗದಲ್ಲಿ ಗೆಲುವು ನಮ್ಮದೇ .. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುಂದಿನ ಒಂದೂವರೆ ವರ್ಷಗಳ ಕಾಲ ಮುಂದುವರಿಯಲಿದೆ…
ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ : ಸಿದ್ದರಾಮಯ್ಯ ಬೆಂಗಳೂರು:ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅವರ…
ಉಡುಪಿ : 28 ಗಂಟೆಗಳ ನಿರಂತರ ಗಾಯನದ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಖ್ಯಾತ ಗಾಯಕ ವಿದ್ವಾನ್ ಯಶವಂತ್…
ಬೈಂದೂರು: ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು - ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್…
ಮುಲ್ಕಿ: ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು ಮುಲ್ಕಿ : ತಿಂಗಳ ಹಿಂದೆ ತನ್ನ ಕೆಲಸದ…
ಮಂಗಳೂರಿನಿಂದ ಕುವೈಟ್ ವಿಮಾನಯಾನ 6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಪರದಾಟ ಮಂಗಳೂರು: ಮಂಗಳೂರಿನಿಂದ ಕುವೈಟ್‌ಗೆ ನೇರ ವಿಮಾನಯಾನ…