ಬ್ರಹ್ಮಾವರ: ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ರಿಕ್ಷಾ : ಆಟೋ ಚಾಲಕ ಸಾವು – Vishwanews24
ಬ್ರಹ್ಮಾವರ: ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ರಿಕ್ಷಾ : ಆಟೋ ಚಾಲಕ ಸಾವು
ಬ್ರಹ್ಮಾವರ: ನಾಯಿಯೊಂದು ಅಡ್ಡ ಬಂದು ಆಟೋ ರಿಕ್ಷಾ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಉಪ್ಪೂರು ಗ್ರಾಮದ ಅಮ್ಮುಂಜೆ ರೈಲ್ವೆ ಓವರ್ ಬ್ರಿಡ್ಜ್ ಸಮೀಪ ನಡೆದಿದೆ.
ರಿಕ್ಷಾ ಹಾವಂಜೆ ಕಡೆ ತೆರಳುತ್ತಿದ್ದಾಗ ನಾಯಿಯೊಂದು ಅಡ್ಡ ಬಂದಿದೆ. ಅದನ್ನ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕ ಗಣೇಶ್ ಪೂಜಾರಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಿಕ್ಷಾ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಕುಂದಾಪುರ ಪ್ಲೈಓವರ್ ಮೇಲೆ ವಿದ್ಯುತ್ ಪ್ರವಾಹ : ವಿಡಿಯೋ ವೈರಲ್ – Vishwanews24
