ಬ್ರಹ್ಮಾವರ: ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸಾವು :- Vishwanews24

Featured, ಉಡುಪಿ

ಬ್ರಹ್ಮಾವರ: ಅಪರಿಚಿತ ವಾಹನ ಡಿಕ್ಕಿ –  ಬೈಕ್ ಸವಾರ ಸಾವು

ಕೋಟ: ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಿನ್ನೆ ರಾತ್ರಿ ಕೋಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಬೆಳಗಾವಿಯ ಶಾಂತಪ್ಪ(40) ಮೃತ ಬೈಕ್ ಸವಾರ. ಇವರು ಬೆಳಗಾವಿಯಿಂದ ಕುಂದಾಪುರ ಮಾರ್ಗವಾಗಿ ಅಜ್ಜರಕಾಡಿನಲ್ಲಿ ಕೆಲಸಕ್ಕೆಂದು ಬರುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಶಾಂತಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜ್ಪೆ: ಲಾರಿಗಳ ನಡುವೆ ನಡೆದ ಭೀಕರ ಅಪಘಾತ : ಚಾಲಕರಿಬ್ಬರ ದುರ್ಮರಣ – Vishwanews24

Leave a Reply