Featured

ಭಟ್ಕಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ; ಪಿಯು ವಿದ್ಯಾರ್ಥಿ ಮೃತ್ಯು – vishwanews24

ಭಟ್ಕಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ; ಪಿಯು ವಿದ್ಯಾರ್ಥಿ ಮೃತ್ಯು

ಭಟ್ಕಳ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಂಗಿನಗುಂಡಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.

ಭಟ್ಕಳ ಫಿರ್ದೌಸ್ ನಗರ ನಿವಾಸಿ ಅನೀಸ್ ಮೊಹ್ತಿಶಂ ಎಂಬವರ ಪುತ್ರ ಮುಹಮ್ಮದ್ ಮೊಹ್ತೆಶಾಂ (18) ಮೃತಪಟ್ಟ ಯುವಕ.

ತೆಂಗಿನಗುಂಡಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಮುಹಮ್ಮದ್ ಮೊಹ್ತೆಶಾಂ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹೆದ್ದಾರಿ ಪ್ರವೇಶಿಸಿದ ವೇಳೆ ಕೇರಳದಿಂದ ಮುಂಬೈನತ್ತ ಸಾಗುತ್ತಿದ್ದ ಪ್ಲೈವುಡ್ ಲಾರಿ ಢಿಕ್ಕಿ ಹೊಡೆದಿದೆ. ಇದರಿಂದ , ಲಾರಿಯ ಚಕ್ರಗಳಡಿ ಸಿಲುಕಿ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮುಹಮ್ಮದ್ ಮೊಹ್ತೆಶಾಂ ಅಲಿ ಪಬ್ಲಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.

ಈ ಕುರಿತು ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

7 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

11 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

12 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

12 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

13 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

13 hours ago