ಭ್ರಷ್ಟ ಸರಕಾರ ಕಿತ್ತೊಗೆದು ಸದೃಢ ಸರಕಾರಕ್ಕೆ ಮತ ನೀಡಿ : ಲಾಲಾಜಿ ಮೆಂಡನ್
ಕಟಪಾಡಿ : ರಾಜ್ಯ ಹಾಗೂ ರಾಷ್ಟ್ರೀಯ ಹಿತವನ್ನು ಕಾಪಾಡುವ , ಸರ್ವರ ಏಳಿಗೆಗೆ ಶ್ರಮಿಸುವ ಬಿಜೆಪಿ ಸರಕಾರಕ್ಕೆ ಅಧಿಕಾರ ನೀಡಿ. ಭ್ರಷ್ಟ ರಾಜ್ಯ ಸರಕಾರವನ್ನು ಕಿತ್ತೊಗೆದು ರಾಜ್ಯದ ಹಿತ ಕಾಯುವ ಸದೃಢ ಬಿಜೆಪಿ ಸರಕಾರ ತನ್ನಿ ಎಂದು ಕಟಪಾಡಿ ಪೇಟೆಯಲ್ಲಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಪು ಕ್ಷೇತ್ರದ ಪ್ರಣಾಳಿಕೆ ಬಿಡುಗಡೆಗೊಳಿಸಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಹೇಳಿದರು.
ಜಿಲ್ಲಾಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿದರು. ಬಿಜೆಪಿ ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ನಾಯಕರಾದ ಯಶ್ಪಾಲ್ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಜಿ.ಪಂ.ಸದಸ್ಯೆ ಶಿಲ್ಪಾ ಜಿ ಸುವರ್ಣ, ಪವಿತ್ರಾ ಶೆಟ್ಟಿ, ರಾಜೇಶ್ ಅಂಬಾಡಿ, ಕೇಸರಿ ಯುವರಾಜ್, ನಯನಾ ಗಣೇಶ್, ಶ್ರೀಧರ ಪೂಜಾರಿ, ಶ್ರೀನಿವಾಸ ಕಿಣೆ, ವೀಣಾ ಶೆಟ್ಟಿ, ಸರೋಜಿನಿ ಶೆಟ್ಟಿ, ಸುಮಾ ಯು. ಶೆಟ್ಟಿ, ದಿಲೀಪ್ ಕಟಪಾಡಿ, ಸನಿಲ್ ಕುಮಾರ್, ಸುಭಾಸ್ ಬಲ್ಲಾಳ್, ಗೋಪಾಲಕೃಷ್ಣ ಪ್ರಭು, ಮಾಲಿನಿ ಶೆಟ್ಟಿ, ಪವಿತ್ರ ಶೆಟ್ಟಿ, ಸಚಿನ್ ಬೊಲ್ಜ, ಗೋಪ ಪೂಜಾರಿ, ಗುರುಪ್ರಸಾದ್ ಶೆಟ್ಟಿ, ವಿಜಯಕುಮಾರ್ ಉದ್ಯಾವರ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಉಪಸ್ಥಿತರಿದ್ದರು.
