ಮಂಗಳೂರಿನಲ್ಲಿರುವ ಬಿಜೆಪಿ ನಾಯಕರಿಗೆ ಸೇರಿದ 11 ಬೀಫ್ ಫ್ಯಾಕ್ಟರಿಗಳನ್ನು ಬಂದ್ ಮಾಡಿಸಲು ಸರ್ಕಾರಕ್ಕೆ ತಾಕತ್ತಿದೆಯೇ: ಖಾದರ್ ಸವಾಲು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರಿನಲ್ಲಿರುವ ಬಿಜೆಪಿ ನಾಯಕರಿಗೆ ಸೇರಿದ 11 ಬೀಫ್ ಫ್ಯಾಕ್ಟರಿಗಳನ್ನು ಬಂದ್ ಮಾಡಿಸಲು ಸರ್ಕಾರಕ್ಕೆ ತಾಕತ್ತಿದೆಯೇ: ಖಾದರ್ ಸವಾಲು

ಮಂಗಳೂರು: ರಾಜ್ಯದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡವರ 11 ಬೀಫ್ ಫ್ಯಾಕ್ಟರಿಗಳು ಮಂಗಳೂರಿನಲ್ಲಿವೆ. ಅದನ್ನು ಬಂದ್ ಮಾಡಿಸುವ ತಾಕತ್ತು ಬಿಜೆಪಿ ಸರ್ಕಾರಕ್ಕಿದೆಯೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಯು.ಟಿ.ಖಾದರ್ ಕಿಡಿಕಾರಿದರು. ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್‌ಗಳನ್ನು ಆರಂಭಿಸುವ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, “ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್‌ಗಳನ್ನು ಆರಂಭಿಸುವ ವಿಚಾರ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಬಂಧಿಸಿದ್ದು. ಇದರ ಬಗ್ಗೆ ಅವರು ಕಾನೂನು ಕ್ರಮ ಕೈಗೊಳ್ಳಲಿ” ಎಂದು ತಿಳಿಸಿದರು.

ಕೂದಲು ಉದುರುತ್ತಿದೆ ಎಂದು ಮನನೊಂದು ಡೆತ್‍ನೋಟ್ ಬರೆದು ಯುವಕ ಆತ್ಮಹತ್ಯೆ – Vishwanews24

“ಗೋವುಗಳ ಬಗ್ಗೆ ಮಾತನಾಡುವ ಬಿಜೆಪಿ ಸರ್ಕಾರ ಗೋ ಸಂತತಿಯನ್ನು ಹೆಚ್ಚಿಸಲು ಯಾವ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಸರಕಾರ ಪಶುಭಾಗ್ಯ ಯೋಜನೆಯನ್ನು ಜಾರಿಗೊಳಿಸಿ ದನ ಕರುಗಳನ್ನು ಉಚಿತವಾಗಿ ನೀಡಲಾಗಿತ್ತು. ಮೇವಿಗೆ ಹಣ ನೀಡಲಾಗಿತ್ತು. ಕೆಂಜಾರಿನ ಗೋಶಾಲೆನ್ನು ಕೆಡವಿಹಾಕಿ ಅಪರೂಪದ ಕಪಿಲ ತಳಿಯ ಗೋವುಗಳನ್ನು ಬೀದಿಪಾಲು ಮಾಡಿದಾಗ ಬಿಜೆಪಿಯವರಿಗೆ ಗೋವಿನ ಬಗ್ಗೆ ಕಾಳಜಿ ಇರಲಿಲ್ಲವೇ. ಅದರ ಶಾಪ‌ ಬಿಜೆಪಿಯವರಿಗೆ ತಟ್ಟದೆ ಇರುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇಂದಿರಾ ಗಾಂಧಿ ಅವರು ಗೋಹತ್ಯೆಯ ಕುರಿತು ಇಡೀ ದೇಶಕ್ಕೇ ಕಾನೂನೊಂದನ್ನು ಜಾರಿಗೊಳಿಸಿದ್ದರು. ಆದರೆ ಇದೀಗ ಬಿಜೆಪಿ ಸರ್ಕಾರ ಒಂದೊಂದು ಕಾನೂನನ್ನು ಜಾರಿಗೊಳಿಸುತ್ತಿದೆ. ಇಡೀ ದೇಶಕ್ಕೆ ಮಾದರಿಯಾಗುವ ಕಾನೂನನ್ನು ದಿಲ್ಲಿಯಲ್ಲಿ ಕುಳಿತವರಿಗೆ ಯಾರ ಭಯವಿದೆ” ಎಂದು ಖಾದರ್ ಪ್ರಶ್ನಿಸಿದರು.

ವಿಟ್ಲ: ಕಾರಣಿಕ ಕ್ಷೇತ್ರಗಳಲ್ಲೊಂದಾದ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಕಳವು – Vishwanews24

Leave a Reply