ಮಂಗಳೂರಿನ ಅಪ್ಪಟ ‘ಅಪ್ಪು’ ಅಭಿಮಾನಿ ಕೈಚಳಕದಲ್ಲಿ ಲೈಫ್ ಬಾಯ್ ಸೋಪ್ನಲ್ಲಿ ಮೂಡಿದ ‘ಅಪ್ಪು – Vishwanews24
ಮಂಗಳೂರಿನ ‘ಅಪ್ಪು’ ಅಭಿಮಾನಿ ಕೈಚಳಕದಲ್ಲಿ ಲೈಫ್ ಬಾಯ್ ಸೋಪ್ನಲ್ಲಿ ಮೂಡಿದ ‘ಅಪ್ಪು – Vishwanews24
ಮಂಗಳೂರು : ಮಂಗಳೂರಿನ ಅಪ್ಪಟ ‘ಅಪ್ಪು’ ಅಭಿಮಾನಿಯೊಬ್ಬರು ‘ಲೈಫ್ ಬಾಯ್’ ಬಾತ್ ಸೋಪ್ನಲ್ಲಿ ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ಗಂಟೆಯಲ್ಲಿ ಸೋಪ್ನಲ್ಲಿ ಅಪ್ಪು ಚಿತ್ರವನ್ನು ಗುಂಡು ಪಿನ್ ಮೂಲಕ ಚಿತ್ರಿಸಿದ್ದಾರೆ.
ಬೇರೆ ಸೋಪ್ಗಳಲ್ಲಿ ಅಪ್ಪು ಚಿತ್ರ ರಚಿಸಲು ಕಲಾವಿದ ದೇವಿಕಿರಣ್ ಯತ್ನಿಸಿದರೂ, ಅದು ಸಾಧ್ಯವಾಗಿರಲಿಲ್ಲ. ಆ ಬಳಿಕ ಅವರು ಲೈಫ್ ಬಾಯ್ ಸೋಪ್ನಲ್ಲಿ ಚಿತ್ರ ರಚನೆಗೆ ತೊಡಗಿದ್ದಾರೆ. ಮೊದಲನೇ ಬಾರಿ ಸರಿಯಾಗಿ ಬಂದಿರಲಿಲ್ಲ. ಎರಡನೇ ಬಾರಿ ಚೆನ್ನಾಗಿ ಬಂದಿದ್ದು, ಆ ಚಿತ್ರ ರಚನೆಯ ವಿಡಿಯೋವನ್ನು ದೇವಿಕಿರಣ್ ಅವರು ಫೇಸ್ಬುಕ್ನಲ್ಲಿ ಮಂಗಳವಾರ ಅಪ್ಲೋಡ್ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಕರ್ನಾಟಕ ಬಂದ್ : ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಭಾಗಶಃ ಬಂದ್ಗೆ ಬೆಂಬಲ – VIshwanews24
