ಮಂಗಳೂರು:ನೂರಾರು ಬೀದಿ ನಾಯಿಗಳ ರಕ್ಷಕಿ ರಜನಿ ಶೆಟ್ಟಿ ಮೇಲೆ ನೆರೆಮನೆಯಾಕೆಯಿಂದ ಹಲ್ಲೆ – Vishwanews24
ಮಂಗಳೂರು:ನೂರಾರು ಬೀದಿ ನಾಯಿಗಳ ರಕ್ಷಕಿ ರಜನಿ ಶೆಟ್ಟಿ ಮೇಲೆ ನೆರೆಮನೆಯಾಕೆಯಿಂದ ಹಲ್ಲೆ
ಮಂಗಳೂರು: ಹಲವಾರು ವರ್ಷಗಳಿಂದ ಬೀದಿ ನಾಯಿಗಳಿಗೆ ಪ್ರತಿದಿನ ಆಹಾರ ನೀಡುತ್ತಿರುವ ಮಂಗಳೂರಿನ ಬಲ್ಲಾಳಬಾಗ್ ನಿವಾಸಿ ರಜನಿ ಶೆಟ್ಟಿ ಮೇಲೆ ಅವರ ನೆರೆಮನೆಯ ಮಹಿಳೆ ಮಂಜುಳಾ ಶೆಟ್ಟಿ ಎಂಬಾಕೆ ಹಲ್ಲೆ ನಡೆಸಿದ ಘಟನೆ ನಡೆದಿದೆ
ಕಳೆದ ಹಲವಾರು ತಿಂಗಳುಗಳಿಂದ ರಜನಿ ಶೆಟ್ಟಿಯ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದು, ಅವರು ಮನೆಯ ಕಸವನ್ನು ಇವರ ಮನೆಯ ಮೇಲೆ ಸುರಿಯುವುದು , ನಾಯಿ ಬೆಕ್ಕಿಗೆ ಕೋಲಿನಿಂದ ಥಳಿಸುವುದು, ಇವರ ಮನೆಗೆ ಅತಿಥಿಗಳು, ಪ್ರಾಣಿ ಪ್ರಿಯರು ಬಂದಾಗ ಅವ್ಯಾಚ ಶಬ್ದಗಳಿಂದ ನಿಂದಿಸುವುದು , ಮನೆಯ ಬಳಿಯ ಕಾರ್ಪೋರೇಷನ್ ನೀರಿನ ಪೈಪ್ ಉಪಯೋಗಿಸಲು ಬಿಡದಿರುವುದು ಹಲವಾರು ರೀತಿಯಲ್ಲಿ ತೊಂದರೆಯನ್ನು ನೀಡುತ್ತಿದ್ದರು ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ ಏಕಾಏಕಿ ಮಂಜುಳಾ ಶೆಟ್ಟಿ ಅವರು ರಜನಿ ಶೆಟ್ಟಿ ಬಟ್ಟೆ ಒಣಗಿಸುತ್ತಿದ್ದ ವೇಳೆ ಬಂದು ಬಟ್ಟೆಗಳನ್ನೆಲ್ಲಾ ಚೆಲ್ಲಾಡಿ ಪಕ್ಕದಲ್ಲಿದ್ದ ಕಲ್ಲನ್ನು ರಜನಿ ಶೆಟ್ಟಿಯತ್ತ ಎಸೆದು ಹಲ್ಲೆ ನಡೆಸಿದ್ದಾರೆ. ಆಕೆ ಎಸೆದ ಕಲ್ಲು ರಜನಿ ಶೆಟ್ಟಿ ಅವರ ಕೈಗೆ ತಾಗಿ ಗಾಯ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮಂಜುಳಾ ಶೆಟ್ಟಿ ಯವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.
ವಿಪಕ್ಷ ನಾಯಕನ ಆಯ್ಕೆ ನಾಳೆಗೆ ಮುಂದೂಡಿಕೆ : ಬಿಎಸ್ ಯಡಿಯೂರಪ್ಪ – Vishwanews24
