ಮಂಗಳೂರು:ಬೈಕ್ ಸ್ಕಿಡ್ – ಗಂಭೀರ ಗಾಯಗೊಂಡಿದ್ದ ಐಎಂಸಿ ಉದ್ಯೋಗಿ ಸಾವು  – VIshwanews24

Featured, ದಕ್ಷಿಣ ಕನ್ನಡ

ಮಂಗಳೂರು:ಬೈಕ್ ಸ್ಕಿಡ್-ಗಂಭೀರ ಗಾಯಗೊಂಡ ಐಎಂಸಿ ಉದ್ಯೋಗಿ ಸಾವು  

ಮಂಗಳೂರು: ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಪಣಂಬೂರಿನ ಐಎಂಸಿ(ಇಂಡಿಯನ್ ಮೊಲಾಸೆಸ್ ಕಂಪೆನಿ)ಯ ನಾಲ್ಕನೇ ಟರ್ಮಿನಲ್ ಉದ್ಯೋಗಿ ಇಂದು ಪಡೀಲ್ ನ ಫಸ್ಟ್ ನ್ಯುರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಂಗಳೂರು: ಉದ್ಯೋಗಕ್ಕೆ ತೆರಳಿದ್ದ ಯುವತಿ ನಾಪತ್ತೆ – Vishwanews24

ಮಾರಿಪಳ್ಳ ನಿವಾಸಿ ಮಾಜಿ ಸೈನಿಕರ ಪುತ್ರ ಸುಜಿತ್ ರಾಜ್(28) ಸಾವನ್ನಪ್ಪಿದವರು. ಜ.16 ರಂದು ರಾತ್ರಿ ಪಾಳಿ ಕರ್ತವ್ಯ ಮುಗಿಸಿ 9 ಕ್ಕೆ ಪಣಂಬೂರಿನಿಂದ ಮಾರಿಪಳ್ಳ ದ ಮನೆ ಕಡೆಗೆ ಹಿಂತಿರುಗುತ್ತಿದ್ದ ಸಂದರ್ಭ ರಾ.ಹೆ.ಯ ವಳಚ್ಚಿಲ್ ಸಮೀಪ ಇವರಿದ್ದ ಪಲ್ಸಾರ್ ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟ ಸುಜಿತ್ ರಾಜ್ ತಲೆ ಡಿವೈಡರ್ ಗೆ ಬಡಿದಿದೆ. ತಕ್ಷಣ ಸ್ಥಳೀಯರು ಫಸ್ಟ್ ನ್ಯುರೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಇಂದು ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ತಾಯಿ, ಮೂವರು ಸಹೋದರರನ್ನು ಅಗಲಿದ್ದಾರೆ. ಕಂಕನಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Leave a Reply