ಮಂಗಳೂರು: ಅರಗ ಜ್ಞಾನೆಂದ್ರ ಅವರು ಕರಾವಳಿಯಲ್ಲಿರುವ ಗುಳಿಗ ಸಾನಿಧ್ಯಕ್ಕೆ ಬಂದು ಕ್ಷಮೆ ಯಾಚನೆ ಮಾಡಬೇಕು : ಬೆಳ್ತಂಗಡಿ ನಲಿಕೆ ಸಮಾಜ ಸಂಘ – Vishwanews24
ಮಂಗಳೂರು: ಅರಗ ಜ್ಞಾನೆಂದ್ರ ಅವರು ಕರಾವಳಿಯಲ್ಲಿರುವ ಗುಳಿಗ ಸಾನಿಧ್ಯಕ್ಕೆ ಬಂದು ಕ್ಷಮೆ ಯಾಚನೆ ಮಾಡಬೇಕು : ಬೆಳ್ತಂಗಡಿ ನಲಿಕೆ ಸಮಾಜ ಸಂಘ
ಮಂಗಳೂರು: ತುಳುನಾಡಿನ ಭೂತಕೋಲಕ್ಕೆ ಬಿಜೆಪಿ ಸಚಿವ ಅರಗ ಜ್ಞಾನೇಂದ್ರ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿಯಲ್ಲಿ ನಡೆದ ಬಿಜೆಪಿ ರೈತ ಸಮಾವೇಶದಲ್ಲಿ ಅವಮಾನ ಮಾಡಿರುವುದನ್ನು ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘ ಖಂಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪದ್ಮನಾಭ ಮೂಡುಬಿದಿರೆ, ತುಳುನಾಡಿನ ಆರಾಧನೆಯಲ್ಲಿ ಒಂದಾದ ಭೂತಕೋಲಕ್ಕೆ ಗೃಹ ಸಚಿವ ಅರಗ ಅವಮಾನ ಮಾಡಿದ್ದಾರೆ. ಗುಳಿಗ ದೈವಕ್ಕೆ ಗುಳಿಗ, ಜಪಾಳ್ ಗುಳಿಗ ಅಂತಾ ಇವರ ನಾಟಕ ಎಂದು ಹೇಳಿ ದೈವಾರಾಧಕರು ಮತ್ತು ತುಳುನಾಡಿನ ಭಕ್ತರಿಗೆ ಅವಮಾನ ಮಾಡಿದ್ದಾರೆ.
ಈ ಕೂಡಲೇ ಸಚಿವ ಅರಗ ಜ್ಞಾನೆಂದ್ರ ಅವರು ಕರಾವಳಿಯಲ್ಲಿರುವ ಯಾವುದೇ ಗುಳಿಗ ಸಾನಿಧ್ಯಕ್ಕೆ ಬಂದು ಕ್ಷಮೆ ಯಾಚನೆ ಮಾಡಬೇಕು. ನಲಿಕೆಯವರ ಬಳಿಯೂ ಕ್ಷಮೆ ಯಾಚನೆ ಮಾಡಬೇಕು.
ಕಾಪು : ಮಾ. 21 ಮತ್ತು 22 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – Vishwanews24
