ಮಂಗಳೂರು/ಉಡುಪಿ: ಕೆಎಸ್‌ಆರ್‌ಟಿಸಿ ದಸರಾ ವಿಶೇಷ ಪ್ರವಾಸ ಪ್ಯಾಕೇಜ್ ಅ. 25 ರವರೆಗೆ ವಿಸ್ತರಣೆ – vishwanews24
ಮಂಗಳೂರು/ಉಡುಪಿ: ಕೆಎಸ್‌ಆರ್‌ಟಿಸಿ ದಸರಾ ವಿಶೇಷ ಪ್ರವಾಸ ಪ್ಯಾಕೇಜ್ ಅ. 25 ರವರೆಗೆ ವಿಸ್ತರಣೆ
ಮಂಗಳೂರು: ಮಂಗಳೂರು ಮತ್ತು ಉಡುಪಿಯಿಂದ ವಿವಿಧ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಅಕ್ಟೋಬರ್ 25 ರವರೆಗೆ ವಿಸ್ತರಿಸಿದೆ.
ಈ ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಮೂಲತಃ ಅಕ್ಟೋಬರ್ 11 ರಿಂದ 20 ರವರೆಗೆ ನಡೆಸಲು ಯೋಜಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಪ್ರಯಾಣಿಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದು.
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ; ಪ್ರಯಾಣಿಕರು ಸುರಕ್ಷಿತ – vishwanews24
ಮಂಗಳೂರು ಪ್ಯಾಕೇಜ್ ವಿವರ:
ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಡುವ “ದಸರಾ ನವದುರ್ಗಾ ದರ್ಶನ” ಪ್ರವಾಸವು ಮರೋಳಿಯ ಸೂರ್ಯನಾರಾಯಣ ದೇವಾಲಯ, ಬೋಳಾರದ ಮಾರಿಯಮ್ಮ ದೇವಾಲಯ, ಮಂಗಳಾದೇವಿ ದೇವಾಲಯ, ಪೊಳಲಿ ರಾಜರಾಜೇಶ್ವರಿ ದೇವಾಲಯ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಾಲಯ, ಕಟೀಲು ದುರ್ಗಾಪರಮೇಶ್ವರಿ ದೇವಾಲಯ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯ, ಸಸಿಹಿತ್ಲು ಭಗವತಿ ದೇವಾಲಯ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಾಲಯ, ಉರ್ವ ಮರಿಯಮ್ಮ ದೇವಾಲಯ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಗಳನ್ನು ತಲುಪಲಿದೆ. ಬಸ್ ರಾತ್ರಿ 8.30 ಕ್ಕೆ ಮಂಗಳೂರಿಗೆ ಹಿಂತಿರುಗಲಿದೆ. ಇದರ ಪ್ರಯಾಣ ದರ ಹಿರಿಯರಿಗೆ 500 ರೂ. ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ 400 ರೂ. ನಿಗದಿಪಡಿಸಲಾಗಿದೆ.
ಉಡುಪಿ: ಅ. 23ರಂದು ಎಸ್ಐಆರ್ ವಿರುದ್ಧ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ – vishwanews24
ಉಡುಪಿ ಪ್ಯಾಕೇಜ್ ವಿವರ:
ಉಡುಪಿಯಿಂದ ದೇವಾಲಯಗಳು ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ ಎರಡು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ.
ಮೊದಲನೇ ಮಾರ್ಗ: ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಾಲಯ, ಶೃಂಗೇರಿ ಶಾರದಾಂಬೆ ದೇವಾಲಯ, ಕಿಗ್ಗದ ಋಷ್ಯಶೃಂಗೇಶ್ವರ ದೇವಾಲಯ, ಹರಿಹರಪುರ ಮಠ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವಾಲಯಗಳನ್ನು ಒಳಗೊಂಡಿದೆ. ಈ ಬಸ್ ಬೆಳಗ್ಗೆ 7.30 ಕ್ಕೆ ಹೊರಟು ರಾತ್ರಿ 8 ಗಂಟೆಗೆ ಹಿಂತಿರುಗುತ್ತದೆ.
ಎರಡನೇ ಮಾರ್ಗ: ನೀಲಾವರ ಮಹಿಷಮರ್ದಿನಿ ದೇವಾಲಯ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯ, ಸೌಕೂರು ದುರ್ಗಾಪರಮೇಶ್ವರಿ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯಗಳನ್ನು ತಲುಪಲಿದ್ದು, ಸಂಜೆ 6.30 ಕ್ಕೆ ಹಿಂತಿರುಗಲಿದೆ.
ಉಡುಪಿ ಉಚ್ಚಿಲ ದಸರಾ- 2026 : ಅ. 21ರಂದು ವಿಜಯದಶಮಿ, ಮಹಾ ಚಂಡಿಕಾಯಾಗ ಮತ್ತು ಶೋಭಾಯಾತ್ರೆ – vishwanews24
ಉಡುಪಿಯ ಎರಡೂ ಪ್ಯಾಕೇಜ್‌ಗಳಿಗೆ ಹಿರಿಯರಿಗೆ 500 ರೂ. ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ 400 ರೂ. ದರ ನಿಗದಿಪಡಿಸಲಾಗಿದೆ.
ಪ್ರಯಾಣಿಕರು ಈ ವಿಸ್ತರಿತ ಪ್ರವಾಸ ಸೇವೆಗಳಿಗಾಗಿ www.ksrtc.in ವೆಬ್‌ಸೈಟ್ ಮೂಲಕ ಆನ್‌ಲೈನ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
