ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಕಾರ್ಮಿಕ ಸಾವು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಕಾರ್ಮಿಕ ಸಾವು – Vishwanews24

ಮಂಗಳೂರು, : ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ವೆಲ್ಡಿಂಗ್ ಮಾಡುತ್ತಿದ್ದ ಕಾರ್ಮಿಕನೋರ್ವ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮೃತರನ್ನು ಚಮನ್‌ ಸಾಬ್‌ (31) ಎಂದು ಗುರುತಿಸಲಾಗಿದೆ.

ಜೂ.9 ರಂದು ಈ ಘಟನೆ ನಡೆದಿದ್ದು ಜಪ್ಪಿನ ಮೊಗರು ಮಹಾಕಾಳಿ ಪಡ್ಡುವಿನ ಏರಾಡಿ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ 4 ಮಹಡಿಯ ಕಟ್ಟಡದಲ್ಲಿ ಚಮನ್ ಸಾಬ್ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಮಧ್ಯದಲ್ಲಿರುವ ಓಪನ್‌’ ಫೋರ್ಚ್‌ ಏರಿಯಾದ ಮುಖಾಂತರ 3ನೇ ಮಹಡಿಯಲ್ಲಿನಿಂತುಕೊಂಡು ಪೈಪ್‌ಗಳನ್ನು ಮೇಲಕೆತ್ತುವ ಕೆಲಸ ಮಾಡುತ್ತಿದ್ದ ಸಮಯ ಆಯತಪ್ಪಿಕೆಳಗಡೆ ನೆಲಕ್ಕೆ ಬಿದ್ದುಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ