ಮಂಗಳೂರು: ಕದ್ರಿಯಲ್ಲಿ ತಬಲ ಕಲಾವಿದ ಸುರೇಶ್ ದಂಪತಿ ಸಾವಿಗೆ ಶರಣು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕದ್ರಿಯಲ್ಲಿ ತಬಲ ಕಲಾವಿದ ಸುರೇಶ್ ದಂಪತಿ ಸಾವಿಗೆ ಶರಣು – Vishwanews24

ಮಂಗಳೂರು: ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕದ್ರಿ ಪಿಂಟೋಸ್ ಲೇನ್ ನಲ್ಲಿ ಇಂದು (ಬುಧವಾರ) ಮುಂಜಾನೆ ನಡೆದಿದೆ.

ತಬಲ ಕಲಾವಿದ ಸುರೇಶ್ ಹಾಗೂ ಅವರ ಪತ್ನಿ ವಾಣಿ ಮೃತರು. ಸುರೇಶ್ ಅವರು ಖ್ಯಾತ ತಬಲ ಕಲಾವಿದರಾಗಿದ್ದರು. ಅವರ ಪತ್ನಿ ವಾಣಿ ಖಾಸಗಿ ಕಾಲೇಜುವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಹಣಕಾಸು ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ.

ಬುಧವಾರ ಮುಂಜಾನೆ ಸುರೇಶ್ ಬಾವಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದು, ಅವರ ಪತ್ನಿ ವಾಣಿ ನೇಣಿಗೆ ಶರಣಾಗಿದ್ದಾರೆ. ಮೃತರು ಓರ್ವ ಮಗನನ್ನು ಅಗಲಿದ್ದಾರೆ.