ಮಂಗಳೂರು : ಜನರು ವಿಕೇಂಡ್ ಕರ್ಫ್ಯೂಗೆ ನೀಡಿದ ಸಹಕಾರ ಲಾಕ್‌ಡೌನ್‌ ಸಂದರ್ಭದಲ್ಲೂ ನೀಡಲಿ : ಎನ್‌ ಶಶಿ ಕುಮಾರ್ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಜನರು ವಿಕೇಂಡ್ ಕರ್ಫ್ಯೂಗೆ ನೀಡಿದ ಸಹಕಾರ ಲಾಕ್‌ಡೌನ್‌ ಸಂದರ್ಭದಲ್ಲೂ ನೀಡಲಿ :ಎನ್‌ ಶಶಿ ಕುಮಾರ್ – Vishwanews24

ಮಂಗಳೂರು, : ಜನರು ವಿಕೇಂಡ್ ಕರ್ಫ್ಯೂಗೆ ನೀಡಿದ ಸಹಕಾರ ಲಾಕ್‌ಡೌನ್‌ ಸಂದರ್ಭದಲ್ಲೂ ನೀಡಲಿ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಎನ್‌ ಶಶಿ ಕುಮಾರ್‌ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ನಾಳೆಯಿಂದ ಮೇ 12 ರ ಬೆಳಿಗ್ಗೆ 6 ರವರೆಗೆ 14 ದಿನಗಳ ಲಾಕ್‌ಡೌನ್‌ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಲಾಕ್‌ಡೌನ್‌ ಸಂದರ್ಭ ಸಹಕಾರ ನೀಡುವಂತೆ ಮನವಿ ಮಾಡಿದರು.

ಜನರು ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಹೇಗೆ ಸಹಕರಿಸಿದಿರೋ ಹಾಗೆಯೇ ಮೇ 12 ರವರೆಗೆ ಜನರು ಸಹಕರಿಸಬೇಕೆಂದು ವಿನಂತಿಸಿದರು.

14 ದಿನಗಳ ಕರ್ಫ್ಯೂ ಸಂದರ್ಭದಲ್ಲಿ ಜನ ತಮ್ಮಷ್ಟಕ್ಕೆ ತಾವೇ ಸ್ವಯಂ ನಿಯಂತ್ರಣ ಮಾಡಿಕೊಂಡರೆ ಸೋಂಕು ಎದುರಿಸಲು ಸಾಧ್ಯ : ಬಸವರಾಜ ಬೊಮ್ಮಾಯಿ -Vishwanews24

ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 54 ಚೆಕ್‌ಪೋಸ್ಟ್‌ಗಳು, 3 ಮೊಬೈಲ್ ಸ್ಕ್ವಾಡ್‌ಗಳು ಇರಲಿದ್ದು, ಸುಮಾರು 1000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಕೂಡಾ ಮಾಹಿತಿ ನೀಡಿದರು.

ಇನ್ನು ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯವಿರುವಾಗ ಜನರಿಗೆ ಸಹಕರಿಸುವಂತೆ ಪೊಲೀಸರುಗೆ ಸಹ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಎಲ್ಲ ಮುಸ್ಲಿಮರೂ ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಮತ್ತು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ : ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ -Vishwanews24