ಮಂಗಳೂರು: ಜಿಲ್ಲೆಯಲ್ಲಿ ಸೆ.20ರಿಂದ 6 ಮತ್ತು 7ನೇ ತರಗತಿ ಆರಂಭ-Vishwanews24
ಮಂಗಳೂರು: ಜಿಲ್ಲೆಯಲ್ಲಿ ಸೆ.20ರಿಂದ 6 ಮತ್ತು 7ನೇ ತರಗತಿ ಆರಂಭ-Vishwanews24
ಮಂಗಳೂರು : ದ.ಕ ಜಿಲ್ಲೆ ಸೆ.20ರಿಂದ 6 ಹಾಗೂ 7ನೇ ತರಗತಿ ಆರಂಭವಾಗಲಿದೆ.
ಇಂದಿನಿಂದ 8, 9 ಹಾಗೂ 10ನೇ ಭೌತಿಕ ತರಗತಿಗ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಒಟ್ಟು 586 ಶಾಲೆಗಳಲ್ಲಿ ತರಗತಿ ಆರಂಭವಾಗಲಿದೆ. 9 ಹಾಗೂ 10ನೇ ತರಗತಿ ಬೆಳಗ್ಗೆ 9ರಿಂದ ಅಪರಾಹ್ನ 1.30ರವರೆಗೆ ಹಾಗೂ 8ನೇ ತರಗತಿ ಅಪರಾಹ್ನ 2ರಿಂದ ಸಂಜೆ 4.30ರವರೆಗೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ದ.ಕ ಡಿಡಿಪಿಐ ಮಲ್ಲೇಸ್ವಾಮಿ, ಪ್ರೌಢಶಾಲೆ ಆರಂಭವಾಗುವು ಹಿನ್ನೆಲೆ ಶಾಲಾ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಸೆ.1ರಿಂದ ಪ್ರಾರಂಭವಾಗಿರುವ ದ್ವಿತೀಯ ಪಿಯು ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ದಾಖಲಾತಿ ಪಡೆದಿರುವ ಒಟ್ಟು 22,867 ವಿದ್ಯಾರ್ಥಿಗಳಲ್ಲಿ ಗುರುವಾರ 18,126 ಮಂದಿ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗಿದ್ದಾರೆ. ಕಲಾ ವಿಭಾಗದಲ್ಲಿ 2,184, ವಾಣಿಜ್ಯ ವಿಭಾಗದಲ್ಲಿ 8,681, ವಿಜ್ಞಾನ ವಿಭಾಗದಲ್ಲಿ 7.261 ಮಂದಿ ಸೇರಿದ್ದಾರೆ.
