ಮಂಗಳೂರು: ಜೆಡಿಎಸ್‌‌ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ ನಿಧನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮಾಜಿ ಸಚಿವ,ಜೆಡಿಎಸ್‌‌ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ(80) ಇಂದು ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ.

ಅಮರನಾಥ ಶೆಟ್ಟಿ ಅವರು ಕರಾವಳಿಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು 10 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಪೈಕಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೂರು ಬಾರಿಯೂ ಅವರು ಸಚಿವರಾಗಿದ್ದಾರೆ. ಜನತಾ ಪಕ್ಷದಿಂದ 1983ರಲ್ಲಿ  ಹಾಗೂ 1985ರಲ್ಲಿ ಶಾಸಕರಾಗಿದ್ದ ಅವರು, 1994ರಲ್ಲಿ ಜನತಾ ದಳದಿಂದ ಶಾಸಕರಾಗಿದ್ದರು.

1965ರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು, ಕಾರ್ಕಳ ತಾಲೂಕಿನ ಪಾಲಡ್ಕ ಪಂಚಾಯತ್‌ನ ಅಧ್ಯಕ್ಷರಾಗಿದ್ದರು. ಹಾಗೆಯೇ ಅವರು ಮೂಡುಬಿದಿರೆ ನಗರ ಪಂಚಾಯತ್‌ನ ಅಧ್ಯಕ್ಷರಾಗಿ, ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.