ಮಂಗಳೂರು: ಟಿಕೆಟ್‌ ಬುಕ್ಕಿಂಗ್ ಹೆಸರಲ್ಲಿ ವಂಚನೆ ; ಬ್ಯಾಂಕ್ ಖಾತೆಗೆ ಕನ್ನ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಟಿಕೆಟ್‌ ಬುಕ್ಕಿಂಗ್ ಹೆಸರಲ್ಲಿ ವಂಚನೆ – ಬ್ಯಾಂಕ್ ಖಾತೆಗೆ ಕನ್ನ

ಮಂಗಳೂರು: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣವನ್ನು ಉಪಾಯದಿಂದ ವಂಚಕನೊಬ್ಬ ತನ್ನ ಖಾತೆಗೆ ವರ್ಗಾಯಿಸಿರುವುದಾಗಿ ವರದಿಯಾಗಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ವ್ಯಕ್ತಿಯೊಬ್ಬರು ಯಾತ್ರಾ ಡಾಟ್‌ ಕಾಮ್‌ ಎನ್ನುವ ವೆಬ್‌ಸೈಟ್‌ನಲ್ಲಿ ಜ. 8ರಂದು 6,380 ರೂ. ಪಾವತಿ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಬಳಿಕ 99,860ರೂ. ಕಳೆದುಕೊಂಡಿದ್ದಾರೆ. ಟಿಕೆಟ್‌ ಬುಕ್‌ ಮಾಡಿದರೂ, ಟಿಕೆಟ್‌ ಬಾರದ ಹಿನ್ನೆಲೆಯಲ್ಲಿ ಸಂಸ್ಥೆಯವರಿಗೆ ಕರೆ ಮಾಡಿ ಹಣ ಹಿಂದಿರುಗಿರುವಂತೆ ಆಗ್ರಹಿಸಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಅಕೌಂಟ್‌ ನಂಬರ್‌ನ ಕೊನೆಯ 6 ಸಂಖ್ಯೆಗಳನ್ನು ಕೇಳಿ ಪಡೆದು, ಎರಡು ದಿನದಲ್ಲಿ ಜಮೆಯಾಗುತ್ತದೆ ಎಂದು ತಿಳಿಸಿದ್ದಾನೆ.

ಪುತ್ತೂರು : ಯಾರಿಗೆ ಹಿಂದುತ್ವದ ಭವ್ಯ ಬದುಕಿನ ಮೇಲೆ ನಂಬಿಕೆಯಿಲ್ಲವೋ ಅಂತವರು ಹಿಂದೂ ಆಗಿರಲು ಸಾಧ್ಯವಿಲ್ಲ : ಅನಂತಕುಮಾರ್ ಹೆಗ್ಡೆ

ಆದರೆ ಜ.11ರಂದು ಅವರ ಮೊಬೈಲ್‌ಗೆ ಖಾತೆಯಿಂದ ಬೇರೆ ಬ್ಯಾಂಕ್‌ ಖಾತೆಗೆ 99,860 ರೂ. ವರ್ಗಾವಣೆಯಾಗಿರುವ ಕುರಿತು ಬ್ಯಾಂಕ್‌ನಿಂದ ಮೆಸೇಜ್‌ಬಂದಿದೆ. ಅದರಂತೆ ಬ್ಯಾಂಕ್‌ನಲ್ಲಿ ದೂರು ದಾಖಲಿಸಿ, ಬಳಿಕ ಸೆನ್‌ ಠಾಣೆಯಲ್ಲೂ ಆನ್‌ಲೈನ್‌ಲ್ಲಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಕುರಿತಂತೆ ದೂರು ದಾಖಲಿಸಿದ್ದಾರೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Leave a Reply