ಮಂಗಳೂರು : ಡಿಸಿಪಿಯವರ ನೇತ್ರತ್ವದಲ್ಲಿ ಖಾಸಗಿ ಬಸ್ಗಳಿಗೆ “ಡಾ.ಬಿ.ಆರ್.ಅಂಬೇಡ್ಕರ್ ವೃತ್ತ” ಸ್ಟಿಕ್ಕರ್ ಅಳವಡಿಕೆ -Vishwanes24
ಮಂಗಳೂರು : ಡಿಸಿಪಿಯವರ ನೇತ್ರತ್ವದಲ್ಲಿ ಖಾಸಗಿ ಬಸ್ಗಳಿಗೆ “ಡಾ.ಬಿ.ಆರ್.ಅಂಬೇಡ್ಕರ್ ವೃತ್ತ” ಸ್ಟಿಕ್ಕರ್ ಅಳವಡಿಕೆ -Vishwanes24
ಮಂಗಳೂರು: ಮಂಗಳೂರು ಟ್ರಾಫಿಕ್ ಪೊಲೀಸ್, ಆರ್ಟಿಓ ಅಧಿಕಾರಿಗಳ ನಿರ್ದೇಶನದಂತೆ ನಗರದ ಎಲ್ಲಾ ಖಾಸಗಿ ಬಸ್ಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸ್ಟಿಕ್ಕರ್ ಅಳವಡಿಸಿದ್ದಾರೆ.
ಸಾಕಷ್ಟು ವರ್ಷಗಳ ಹಿಂದೆಯೇ ಜ್ಯೋತಿ ಸಿನಿಮಾ ಟಾಕೀಸ್ ಬಳಿಯ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡಲಾಗಿದ್ದರೂ, ಬಸ್ ಗಳಲ್ಲಿ ಈಗಲೂ ‘ಜ್ಯೋತಿ’ ಎಂಬ ಸ್ಟಿಕ್ಕರ್ ಅಳವಡಿಕೆ ಮಾಡಲಾಗಿತ್ತು.
ಇದನ್ನೂ ಓದಿ : ಮಂಗಳೂರು: ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಲ್ಲಿ ಕೊರೊನಾ ದೃಢ , ಕಾಲೇಜ್ ಸೀಲ್ಡೌನ್ -Vishwanews24
ಇತ್ತೀಚೆಗೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಎಸ್ಸಿ- ಎಸ್ಟಿ ಕುಂದುಕೊರತೆಗಳ ಸಭೆಯಲ್ಲಿ ಈ ಬಗ್ಗೆ ದೂರು ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿಪಿ ಹರಿರಾಂ ಶಂಕರ್, ಮುಂದಿನ ಕುಂದುಕೊರತೆ ಸಭೆಯೊಳಗೆ ಇದನ್ನು ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು.
ಇದೀಗ ಮಂಗಳೂರು ನಗರ ಸಂಚಾರ ಪೊಲೀಸ್, ಖಾಸಗಿ ಬಸ್ ಅಸೋಸಿಯೇಶನ್, ಆರ್ಟಿಒ ಮತ್ತು ಡಿಎಸ್ಎಸ್ ಸೇರಿದಂತೆ ವಿವಿಧ ಎಸ್ಸಿ- ಎಸ್ಟಿ ಸಂಘಟನೆಗಳ ಜಂಟಿ ಪ್ರಯತ್ನದಿಂದ ನಗರದ ಎಲ್ಲ ಬಸ್ಗಳಲ್ಲಿ ಅಂಬೇಡ್ಕರ್ ಸರ್ಕಲ್ ಸ್ಟಿಕ್ಕರ್ಗಳನ್ನು ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ : ಮಣಿಪಾಲ : MIT ಕಾಲೇಜಿನಲ್ಲಿ 52 ವಿದ್ಯಾರ್ಥಿಗಳಿಗೆ ಕೊರೊನಾ ದೃಢ ; ಕಾಲೇಜು ಕ್ಯಾಂಪಸ್ ಈಗ ಕಂಟೇನ್ಮೆಂಟ್ ಜೋನ್ -Vishwanews24
