ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ.5ರಂದು ಮಂಗಳೂರು ನಗರದ ವಿವಿಧೆಡೆ ಮೊಸರುಕುಡಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆಗಳು ನಡೆಯಲಿದ್ದು, ಸಂಜೆ 5 ಗಂಟೆಯಿಂದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಮೆರವಣಿಗೆ ಸಾಗುವ ರಸ್ತೆಗಳು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ಮಂಗಳೂರು ನಗರ ಪೊಲೀಸ್ ಇಲಾಖೆ ಸೂಚಿಸಿದೆ.
ತೊಕ್ಕೊಟ್ಟು ಒಳಪೇಟೆ ಮೊಸರುಕುಡಿಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಜಂಕ್ಷನ್ನಿಂದ ಕೊಲ್ಯ ಜಂಕ್ಷನ್ವರೆಗೆ ಹಾಗೂ ಉಳ್ಳಾಲ ಅಬ್ಬಕ್ಕ ವೃತ್ತ ಮತ್ತು ಒಳಪೇಟೆ ಭಾಗದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. ತಲಪಾಡಿ ಕಡೆಗೆ ತೆರಳುವ ವಾಹನಗಳು ತೊಕ್ಕೊಟ್ಟು ಜಂಕ್ಷನ್ನಲ್ಲಿ ಸರ್ವಿಸ್ ರಸ್ತೆಗೆ ತಿರುಗಿ, ದೇರಳಕಟ್ಟೆ ಜಂಕ್ಷನ್ ಮೂಲಕ ಮಡ್ಯಾರ್–ಮಾಡೂರು–ಬೀರಿಕೋಟೆಕಾರ್ ಜಂಕ್ಷನ್ ಮಾರ್ಗ ಬಳಸಬಹುದು. ಉಳ್ಳಾಲ ಅಬ್ಬಕ್ಕ ವೃತ್ತ ಹಾಗೂ ತೊಕ್ಕೊಟ್ಟು ಒಳಪೇಟೆ ಕಡೆಗೆ ತೆರಳುವ ವಾಹನಗಳು ಬೀರಿಕೋಟೆಕಾರ್–ಸೋಮೇಶ್ವರ ಮಾರ್ಗವಾಗಿ ಸಂಚರಿಸಬಹುದು.
ಕದ್ರಿ ಶ್ರೀ ಗೋಪಾಲಕೃಷ್ಣ ಮಠದ ಕದ್ರಿ ಕಂಬಳ ಮೊಸರುಕುಡಿಕೆ ಹಿನ್ನೆಲೆಯಲ್ಲಿ ಬಟ್ಟಗುಡ್ಡೆ ಜಂಕ್ಷನ್ನಿಂದ ಕದ್ರಿ ಕಂಬಳ–ಭಾರತ್ ಬೀಡಿ ವರೆಗೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. ಬಟ್ಟಗುಡ್ಡೆಯಿಂದ ಕದ್ರಿ ಕಂಬಳ ಕಡೆಗೆ ತೆರಳುವವರು ಬಿಜೈ ಜಂಕ್ಷನ್–ಪಿಂಟೋ ಬೇಕರಿ–ಕರಂಗಲಪಾಡಿ ಮಾರ್ಗ ಬಳಸಬಹುದು. ಭಾರತ್ ಬೀಡಿಯಿಂದ ಬಟ್ಟಗುಡ್ಡೆ ಕಡೆಗೆ ತೆರಳುವ ವಾಹನಗಳು ಮಲ್ಲಿಕಟ್ಟೆ–ನಂತೂರು ಮಾರ್ಗದಲ್ಲಿ ಸಂಚರಿಸಬಹುದು.
ಅತ್ತಾವರ ಶ್ರೀ ಅರಸು ಮುಂಡತ್ತಾಯ ಮೈದಾನದಲ್ಲಿ ನಡೆಯುವ ಮೊಸರುಕುಡಿಕೆ ಹಿನ್ನೆಲೆಯಲ್ಲಿ ಕೋಟಿಚೆನ್ನಯ ವೃತ್ತದಿಂದ ಬಾಬುಗುಡ್ಡೆ–ಅತ್ತಾವರ ಕೆ.ಎಂ.ಸಿ. ರಸ್ತೆ–ಆನಂದ ಶೆಟ್ಟಿ ವೃತ್ತದವರೆಗೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. ಕೋಟಿಚೆನ್ನಯ ವೃತ್ತದಿಂದ ಅತ್ತಾವರ ಕಡೆಗೆ ತೆರಳುವವರು ವೆಲೆನ್ಸಿಯಾ ಮಾರ್ಗ ಬಳಸಬಹುದು. ಅತ್ತಾವರದಿಂದ ಕೋಟಿಚೆನ್ನಯ ವೃತ್ತದ ಕಡೆಗೆ ತೆರಳುವ ವಾಹನಗಳು ಆನಂದ ಶೆಟ್ಟಿ ವೃತ್ತದಲ್ಲಿ ಎಡಕ್ಕೆ ತಿರುಗಿ ಎಸ್.ಎಲ್. ಮಥಾಯಸ್ ರಸ್ತೆ–ಹೈಲ್ಯಾಂಡ್ ಜಂಕ್ಷನ್ ಮಾರ್ಗವಾಗಿ ಸಂಚರಿಸಬಹುದು.
ಕೊಟ್ಟಾರ ಶ್ರೀ ಕೃಷ್ಣ ಜ್ಞಾನೋದಯ ಭಜನಾ ಮಂದಿರದ ಮೊಸರುಕುಡಿಕೆ ಹಿನ್ನೆಲೆಯಲ್ಲಿ ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್ವರೆಗೆ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. ಲಾಲ್ಬಾಗ್/ನಾರಾಯಣಗುರು ವೃತ್ತದಿಂದ ಕೊಟ್ಟಾರ ಚೌಕಿ ಕಡೆಗೆ ತೆರಳುವ ವಾಹನಗಳು ಕೆ.ಎಸ್.ಆರ್.ಟಿ.ಸಿ.–ಕುಂಟಿಕಾನ ಮಾರ್ಗ ಬಳಸಬಹುದು. ಕೊಟ್ಟಾರ ಚೌಕಿಯಿಂದ ಲಾಲ್ಬಾಗ್ ಕಡೆಗೆ ತೆರಳುವ ಲಘು ವಾಹನಗಳು ಕುಂಟಿಕಾನ–ಬಿಜೈ–ಕೆ.ಎಸ್.ಆರ್.ಟಿ.ಸಿ. ಮಾರ್ಗದಲ್ಲಿ ಸಂಚರಿಸಬಹುದು. ಘನ ವಾಹನಗಳು ಕುಂಟಿಕಾನ–ಕೆ.ಪಿ.ಟಿ. ವೃತ್ತ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಶ್ರೀನಗರ : ಪಾರ್ಕಿಂಗ್ ಮಾಡುವ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ; ತಪ್ಪಿದ ಭಾರೀ ಅವಘಡ ಶ್ರೀನಗರ: ನವಿ…
ಪಣಂಬೂರು: ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ: ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರು ಸುರತ್ಕಲ್: ಕಾರ್ಕಳದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್…
ವಿಜಯ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ; ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ : ನಾಗರತ್ನ ಪ್ರತಿಕ್ರಿಯೆ ಬೆಂಗಳೂರು: ನಟ ದುನಿಯಾ…
ಪಡುಬಿದ್ರಿ : ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ; ಸವಾರ ಸಾವು ಉಡುಪಿ: ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ…
ಸೆ. 5ರಂದು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ ಮಂಗಳೂರು : ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ…
ಮಂಗಳೂರು: ಫಳ್ನೀರ್ ನಲ್ಲಿರುವ ಬ್ಲಿಂಕ್ ಇಟ್ ಮಳಿಗೆಗೆ ಅರೋಗ್ಯ ಇಲಾಖೆ ದಾಳಿ ಕೊಳೆತ ಮೊಟ್ಟೆ ಪತ್ತೆ, ಗೋದಾಮುಗೆ ಸೀಲ್ ಮಾಡಿದ…