ರಾಷ್ಟ್ರ ನ್ಯೂಸ್

ಶ್ರೀನಗರ : ಪಾರ್ಕಿಂಗ್ ಮಾಡುವ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ;  ತಪ್ಪಿದ ಭಾರೀ ಅವಘಡ -vishwanews24

ಶ್ರೀನಗರ : ಪಾರ್ಕಿಂಗ್ ಮಾಡುವ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ;  ತಪ್ಪಿದ ಭಾರೀ ಅವಘಡ

ಶ್ರೀನಗರ: ನವಿ ಮುಂಬೈನಿಂದ ಶ್ರೀನಗರಕ್ಕೆ ಆಗಮಿಸಿದ್ದ ಇಂಡಿಗೋ ಸಂಸ್ಥೆಯ ವಿಮಾನವೊಂದು ಶುಕ್ರವಾರ ಬೆಳಗ್ಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುವ ವೇಳೆ ವಿಜುಯಲ್ ಡಾಕಿಂಗ್ ಗೈಡೆನ್ಸ್ ಸಿಸ್ಟಮ್ (ವಿಡಿಜಿಎಸ್) ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.

‘ವಿಟಿ-ಎನ್‌ಒಜಿ’ ನೋಂದಣಿ ಸಂಖ್ಯೆಯ ಇಂಡಿಗೋ 6ಇ 225 ವಿಮಾನವು ಬೆಳಗ್ಗೆ ಸುಮಾರು 9:02 ರ ವೇಳೆಗೆ ಬೇ ಸಂಖ್ಯೆ 06 ರಲ್ಲಿ ಪಾರ್ಕಿಂಗ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ತಕ್ಷಣವೇ ಕೈಚಾಲಿತ ಏಣಿಗಳನ್ನು (ಮ್ಯಾನುವಲ್ ಸ್ಟೇರ್ಸ್) ಬಳಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಘಟನೆಗೆ ಸಂಬಂಧಿಸಿದಂತೆ ನಿಗದಿತ ನಿಯಮಾವಳಿಗಳ ಪ್ರಕಾರ ಸೂಕ್ತ ಪ್ರಾಧಿಕಾರಗಳಿಂದ ತನಿಖೆ ನಡೆಸಲಾಗುವುದು ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ. ತನಿಖೆ ಪೂರ್ಣಗೊಂಡ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದ್ದು, ಪ್ರಸ್ತುತ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಈ ಘಟನೆಯ ಹೊರತಾಗಿಯೂ ವಿಮಾನ ನಿಲ್ದಾಣದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗಿಲ್ಲ. ವಿಮಾನಗಳ ಆಗಮನ ಮತ್ತು ನಿರ್ಗಮನ ಸೇವೆಯು ನಿಗದಿತ ಸಮಯದಂತೆಯೇ ಸಾಗಿದ್ದು, ವ್ಯವಸ್ಥೆ ಯಥಾಸ್ಥಿತಿಯಲ್ಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Vishwa News 24

Recent Posts

ಪಣಂಬೂರು: ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ: ಅದೃಷ್ಟವಶಾತ್  ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರು  -vishwanews24

ಪಣಂಬೂರು: ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ: ಅದೃಷ್ಟವಶಾತ್  ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರು  ಸುರತ್ಕಲ್: ಕಾರ್ಕಳದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್…

29 minutes ago

ವಿಜಯ್  ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ; ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ : ನಾಗರತ್ನ ಪ್ರತಿಕ್ರಿಯೆ -vishwanews24

ವಿಜಯ್  ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ; ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ : ನಾಗರತ್ನ ಪ್ರತಿಕ್ರಿಯೆ ಬೆಂಗಳೂರು: ನಟ ದುನಿಯಾ…

47 minutes ago

ಪಡುಬಿದ್ರಿ : ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ; ಸವಾರ ಸಾವು -vishwanews24

ಪಡುಬಿದ್ರಿ : ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಡಿಕ್ಕಿ ; ಸವಾರ ಸಾವು ಉಡುಪಿ: ನಂದಿಕೂರಿನ ಕಾರ್ಕಳ–ಪಡುಬಿದ್ರಿ ಬಸ್ ನಿಲ್ದಾಣದ…

1 hour ago

ಸೆ. 5ರಂದು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ -vishwanews24

ಸೆ. 5ರಂದು ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ಸಂಚಾರ ಮಂಗಳೂರು : ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ…

3 hours ago

ಮಂಗಳೂರು: ಫಳ್ನೀರ್ ನಲ್ಲಿರುವ ಬ್ಲಿಂಕ್ ಇಟ್ ಮಳಿಗೆಗೆ ಅರೋಗ್ಯ ಇಲಾಖೆ ದಾಳಿ -vishwanews24

ಮಂಗಳೂರು: ಫಳ್ನೀರ್ ನಲ್ಲಿರುವ ಬ್ಲಿಂಕ್ ಇಟ್ ಮಳಿಗೆಗೆ ಅರೋಗ್ಯ ಇಲಾಖೆ ದಾಳಿ ಕೊಳೆತ ಮೊಟ್ಟೆ ಪತ್ತೆ, ಗೋದಾಮುಗೆ ಸೀಲ್‌ ಮಾಡಿದ…

4 hours ago

ಉಡುಪಿ : ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ -vishwanews24

ಉಡುಪಿ ಪಿ.ಒ.ಪಿ / ರಾಸಾಯನಿಕ ಬಳಸಿ ಗಣೇಶ ವಿಗ್ರಹಗಳ ತಯಾರಿ, ಮಾರಾಟ ನಿಷೇಧ ಉಡುಪಿ : ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ…

19 hours ago