ಮಂಗಳೂರು: ನ್ಯಾಯವಾದಿಗೆ ಹಲ್ಲೆ ಪ್ರಕರಣ: ಪುಂಜಾಲಕಟ್ಟೆ ಎಸ್ ಐ ಅಮಾನತು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನ್ಯಾಯವಾದಿಗೆ ಹಲ್ಲೆ ಪ್ರಕರಣ: ಪುಂಜಾಲಕಟ್ಟೆ ಠಾಣೆಯ ಎಸ್ ಐ ಅಮಾನತು

ಮಂಗಳೂರು:ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪ ಮಾಡಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪಿಎಸ್ಐ ಸುತೇಶ್ನನ್ನುಅಮಾನತು ಮಾಡಿ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದರು.

ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದು ಎದುರುದಾರರ ವಿರುದ್ಧ ಪ್ರತಿಬಂದಕಾಜ್ಞೆ ಇದ್ದರೂ ಕೂಡ ಎದುರುದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು ಇದನ್ನು ಖಂಡಿಸಿ ನೂರಾರು ವಕೀಲರಿಂದ ಕೋರ್ಟ್ ಮುಂಭಾಗ ಪ್ರತಿಭಟನೆ ಮಾಡಿದ್ದರು.

ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಎಸ್ ಐ ಸುತೇಶ್ ಅವರನ್ನು ದಕ ಜಿಲ್ಲಾ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆ ಹಿನ್ನಲೆಯಲ್ಲಿ ಎಸ್ ಐ ಸುತೇಶ್ ಅವರನ್ನು ಪಶ್ಚಿಮ ವಲಯದ ಐಜಿಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Leave a Reply