ಮಂಗಳೂರು : ಪಕ್ಷಾತೀತವಾಗಿ ಉಳಿಯುವ ಬಯಕೆ ಸ್ಪರ್ಧಾಕಣದಿಂದ ದೂರ ಸರಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ : vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಪಕ್ಷಾತೀತವಾಗಿ ಉಳಿಯುವ ಬಯಕೆ ಸ್ಪರ್ಧಾಕಣದಿಂದ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ದೂರ : vishwanews24

ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಬರಬಾರದು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಸಹಕಾರಿಗಳೆಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿರುವ ಸಹಕಾರಿ ಕ್ಷೇತ್ರದ ನಾಯಕರಾದ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ಡಿಸೆಂಬರ್ 10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಿಂದ ದೂರ ಸರಿದಿದ್ದಾರೆ.

ಸಹಕಾರಿ ಕ್ಷೇತ್ರದ ಪ್ರಮುಖರ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರೆಲ್ಲರ ಆಶಯ ಡಾ| ಎಂ.ಎನ್.ರಾಜೇಂದ್ರ ಕುಮಾರ್‌ ಅವರು ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತ ನಾಯಕರಾಗಿ ಉಳಿಯಬೇಕು, ರಾಜಕೀಯ ಪ್ರವೇಶದಿಂದ ಸಹಕಾರಿಗಳೆಲ್ಲರಿಂದ ದೂರ ಉಳಿಯುವ ಸಾಧ್ಯತೆ ಇರುವುದರಿಂದ ಅವರು ಸಹಕಾರಿ ನಾಯಕರಾಗಿಯೇ ಇರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಅವರು ಸ್ಪರ್ಧಾಕಣದಿಂದ ದೂರಸರಿಯಲು ನಿರ್ಧರಿಸಿದ್ದಾರೆ.

BIG BREAKING : ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತನಾಗಿ ಉಳಿಯುವ ಬಯಕೆ ; ವಿಧಾನ ಪರಿಷತ್ ಚುನಾವಣೆ ಸ್ಪರ್ಧಾಕಣದಿಂದ ಡಾ ಎಂ. ಎನ್. ರಾಜೇಂದ್ರ ಕುಮಾರ್ ದೂರ – VIshwanews24

ಸಹಕಾರಿಗಳೆಲ್ಲರ ಆಶಯದಂತೆ ಅವರು ಈ ನಿರ್ಧಾರವನ್ನು ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ. ಸಹಕಾರ ಕ್ಷೇತ್ರದಿಂದಲೇ ತಾನು ಗುರುತಿಸಿಕೊಳ್ಳಬೇಕು ಹಾಗೂ ಸಹಕಾರ ಕ್ಷೇತ್ರಕ್ಕೆ ತನ್ನಿಂದಾದ ಉತ್ತಮ ಕೆಲಸವನ್ನು ಮುಂದುವರಿಸುವ ಉದ್ದೇಶ ಅವರಲ್ಲಿದೆ. ಹಾಗಾಗಿ ಸಹಕಾರಿಗಳ ಆಶಯಕ್ಕೆ ಸ್ಪಂದಿಸುವ ಉದ್ದೇಶದಿಂದ ಅವರು ವಿಧಾನ ಪರಿಷತ್ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ.

https://fb.watch/9olnkUXeQA/