ಮಂಗಳೂರು: ಪೇಂಟಿಂಗ್ ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಪೇಂಟಿಂಗ್ ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು

ಮಂಗಳೂರು : ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಡುವಿನಲ್ಲಿ ನಡೆದಿದೆ.

ಬಂಟ್ವಾಳ ಫರಂಗಿಪೇಟೆ ಅರ್ಕುಳ ನಿವಾಸಿ ವಳಚ್ಚಿಲ್ ಪದವು ನಿವಾಸಿ ಜೈನುದ್ದೀನ್ ಅಬ್ದುಲ್ ರೆಹಮಾನ್ (43) ಮೃತರು.

ಹೆನ್ರಿ ಡಿ’ಸೋಜಾ ಎಂಬವರ ಮನೆಯಲ್ಲಿ ಮೇಲ್ಟಾವಣಿ ಬಳಿ ಕಬ್ಬಿಣದ ಏಣಿ ಮೇಲೆ ನಿಂತು ಪೇಂಟಿಂಗ್ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹೈಟೆನ್ಸನ್ ವೈರ್ ತಾಗಿ ವಿದ್ಯುತ್ ಪ್ರವಹಿಸಿ ಕೆಳಗೆ ಕುಸಿದು ಬಿದ್ದರು. ಅವರ ಜತೆ ಕೆಲಸ ಮಾಡುತ್ತಿದ್ದ ರಾಜೇಶ್ ಮತ್ತು ಬಾಲಕೃಷ್ಣ ಅವರು ಆಸ್ಪತ್ರೆಗೆ ಕರೆದೊಯ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್,ಲ್ಯಾಬ್‍ಗಳ ಮೇಲೆ ಆರೋಗ್ಯ ಇಲಾಖೆ ದಾಳಿ – vishwanews24

Leave a Reply