ಮಂಗಳೂರು: ಬಂಟರಿಗೂ ನಿಗಮ ನೀಡಬೇಕು – ನೀಡದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ : ಐಕಳ ಹರೀಶ್ ಶೆಟ್ಟಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬಂಟರಿಗೂ ನಿಗಮ ನೀಡಬೇಕು – ನೀಡದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ : ಐಕಳ ಹರೀಶ್ ಶೆಟ್ಟಿ

ಮಂಗಳೂರು: ಬಂಟ ಸಮುದಾಯಕ್ಕೂ ಸರ್ಕಾರ ಪ್ರಾತಿನಿಧ್ಯ ನೀಡಬೇಕು ಎಂದು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ.

ಮಧ್ಯಮದ ಜೊತೆ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಬಂಟರಿಗೂ ನಿಮಗ ರಚನೆ ಸರ್ಕಾರ ಮಾಡಬೇಕು. ೨ಎ ಆಡಿಯಲ್ಲಿ ಬಂಟ ಸಮುದಾಯಕ್ಕೂ ಮೀಸಲಾತಿ ನೀಡಬೇಕು. ಇತರೆ ಸಮುದಾಯಕ್ಕೆ ನೀಡಿದ್ದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ನಾವು ಕೂಡಾ ಈ ಹಿಂದೆ ನಳಿನ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದ್ದೇವೆ ಎಂದರು.

ನಾವು ಬೀದಿಗೆ ಇಳಿದು ಹೋರಾಟ ನಡೆಸೋದಿಲ್ಲ. ಆದರೆ ನಿಗಮ ನೀಡದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.

ಹೆಜಮಾಡಿ: ದೋಣಿ ಮಗುಚಿ ಮೀನುಗಾರ ಸಾವು – Vishwanews24

Leave a Reply