ಮಂಗಳೂರು: ಬಸ್‌ನಲ್ಲಿ ಕಿರುಕುಳ ಪೋಸ್ಟ್: ಆರೋಪಿ ಹುಸೈನ್ ಅರೆಸ್ಟ್‌, ಪೊಲೀಸರೆದುರೇ ಯುವತಿಯಿಂದ ಆರೋಪಿಗೆ ಕಪಾಳಮೋಕ್ಷ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬಸ್‌ನಲ್ಲಿ ಕಿರುಕುಳ ಪೋಸ್ಟ್: ಆರೋಪಿ ಹುಸೈನ್ಅರೆಸ್ಟ್‌, ಪೊಲೀಸರೆದುರೇ ಯುವತಿಯಿಂದ ಆರೋಪಿಗೆ ಕಪಾಳಮೋಕ್ಷ -Vishwanews24

 

ಮಂಗಳೂರು: ನಗರದ ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಕ್ಕದಲ್ಲೇ ಕುಳಿತ ವ್ಯಕ್ತಿಯೊಬ್ಬ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರಿನಾದ್ಯಂತ ಭಾರೀ ಸುದ್ದಿಯಾಗಿತ್ತು, ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆಯಾಗಿತ್ತು. ಇದೀಗ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಎರಡು ದಿನ ಕಳೆಯೊದರೊಳಗೆ ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ.

ಕಾಸರಗೋಡಿನ ಪೆರ್ಲ ನಿವಾಸಿ ಹುಸೈನ್ (41) ಬಂಧಿತ ಆರೋಪಿ. ಇದೇ 14 ರಂದು ಖಾಸಗಿ ಬಸ್‌ನಲ್ಲಿ ಮಂಗಳೂರಿನ ಪಂಪ್‌ವೆಲ್‌ನತ್ತ ಮಹೇಶ್‌ ಬಸ್‌ನಲ್ಲಿ ಯುವತಿ ಪ್ರಯಾಣಿಸುತ್ತಿದ್ದ ವೇಳೆ, ದೇರಳಕಟ್ಟೆಯಿಂದ ಬಸ್‌ ಹತ್ತಿದ್ದ ಹುಸೇನ್‌ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆಯ ಮೈ ಮುಟ್ಟುವ ಪ್ರಯತ್ನ ನಡೆಸಿದ್ದಾನೆ. ಕೂಡಲೇ ಯುವತಿ ಧೈರ್ಯ ತೋರಿ ಆತನಿಗೆ ಬೈದು ಬೇರೆ ಸೀಟಿನತ್ತ ಕಳುಹಿಸಿದ್ದಾಳೆ.

ಆದರೆ ಬೇರೆ ಬಸ್‌ನಿಂದ ಮತ್ತೆ ಇಳಿದು ಯುವತಿ ಇದ್ದ ಬಸ್‌ ಏರಿ ಮತ್ತೆ ಆಕೆಯ ಬಳಿ ಕುಳಿತು ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಈ ರೀತಿ ಯಾರಿಗೂ ಆಗಬಾರದು ಎನ್ನುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಆತನ ಫೋಟೊ ಹಾಕಿ ತನ್ನ ನೋವು ತೋಡಿಕೊಂಡಿದ್ದಳು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಸಂಬಂಧ ತಂಡ ರಚಿಸಿದ ಪೊಲೀಸರು ಆರೋಪಿ ಹುಸೈನ್‌ನನ್ನು ಬಂಧಿಸಿದ್ದಾರೆ.

ಪೊಲೀಸರ ಕೊಲೆಗೆ ಯತ್ನಿಸಿದ್ದು ಎಸ್‌‌ಡಿಪಿಐ ಹಾಗೂ ಪಿಎಫ್‌‌ಐ ಕಾರ್ಯಕರ್ತರು, ಎಲ್ಲಾ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು : ಶರಣ್‌‌ ಪಂಪ್‌‌ವೆಲ್ -Vishwanews24

ಪೊಲೀಸರೆದುರೇ ಯುವತಿಯಿಂದ ಕಪಾಳಮೋಕ್ಷ

ಬಸ್‌ ಪ್ರಯಾಣದಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿಗೆ, ನಗರದಲ್ಲಿನ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲೇ ನೊಂದ ಯುವತಿಯು ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಗುರುವಾರ ಕಮಿಷನರೇಟ್‌ ಕಚೇರಿಗೆ ಕರೆದುಕೊಂಡು ಬಂದಿದ್ದರು. ಘಟನೆಯಿಂದ ನೊಂದಿದ್ದ ಯುವತಿಗೆ, ಆತನ ಮುಖ ನೋಡುತ್ತಲೇ ಆಕ್ರೋಶದ ಕಟ್ಟೆಯೊಡೆದಿದೆ. ಹೀಗಾಗಿ ಪೊಲೀಸರೆದುರೇ ಹುಸೈನ್‌ಗೆ ಯುವತಿ ಕಪಾಳಮೋಕ್ಷ ಮಾಡಿದ್ದಾಳೆ.

ಎಲ್ಲ ಯುವತಿಯರು, ಮಹಿಳೆಯರಿಗೆ ಧೈರ್ಯ, ವಿಶ್ವಾಸ ಮೂಡಿಸುವ ಕಾರ್ಯ ಮಾಡಿದ್ದಾರೆ’ ಎಂದರು. ಪ್ರಕರಣ ಭೇದಿಸಿದ ತಂಡಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ₹10 ಸಾವಿರ ಬಹುಮಾನ ನೀಡಿದರು. ಕಮಿಷನರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಶಿವಮೊಗ್ಗ ಡೈನಾಮೈಟ್ ಸ್ಪೋಟ : ಉನ್ನತ ಮಟ್ಟದ ತನಿಖೆಗೆ ಸಿಎಂ ಬಿಎಸ್‌ವೈ ಆದೇಶ ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ -Vishwanews24