ಮಂಗಳೂರು: ಬಿಎಸ್ ವೈ ನಮ್ಮ ಪಾರ್ಟಿಯ ಆತ್ಮ,ಈಶ್ವರಪ್ಪ ಶೆಟ್ಟರ್ ಎರಡು ಕಣ್ಣುಗಳು : ನಳಿನ್ ಕಟೀಲ್ -Vishwanews24
ಮಂಗಳೂರು: ಬಿಎಸ್ ವೈ ನಮ್ಮ ಪಾರ್ಟಿಯ ಆತ್ಮ,ಈಶ್ವರಪ್ಪ ಶೆಟ್ಟರ್ ಎರಡು ಕಣ್ಣುಗಳು : ನಳಿನ್ ಕಟೀಲ್ -Vishwanews24
ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ..
ತನಿಖೆ ಮೂಲಕ ಸತ್ಯ ಹೊರಬರಲಿ. ಎಲ್ಲದಕ್ಕೂ ಬಳಿಕ ಉತ್ತರ ನೀಡ್ತೇನೆ..
ಮಂಗಳೂರು, : ಸಿಎಂ ಬದಲಾವಣೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರದಲ್ಲಿ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಜು.19 ರ ಸೋಮವಾರ ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ.
ಇನ್ನು ಇಂದು ಆರಂಭವಾಗಲಿರುವ ಸಂಸತ್ ಮುಂಗಾರು ಅಧಿವೇಶನಕ್ಕಾಗಿ ದೆಹಲಿಗೆ ತೆರಳಬೇಕಾಗಿದ್ದ ನಳಿನ್ ಪರಿಸ್ಥಿತಿ ಅವಲೋಕನಕ್ಕಾಗಿ ಸದನ ಅನುಮತಿ ಪಡೆದು ಅಧಿವೇಶನಕ್ಕೆ ಗೈರಾಗಿ ನಗರದಲ್ಲೇ ಉಳಿದುಕೊಳ್ಳಲಿದ್ದಾರೆ . ಅಲ್ಲದೆ ಇಂದೇ ಮುಖ್ಯಮಂತ್ರಿಗೆ ಆಡಿಯೋ ತನಿಖೆಗಾಗಿ ಪತ್ರಬರೆದು ಒತ್ತಾಯಿಸಲಿದ್ದಾರೆ. ನಾಳೆ ಬೆಳಗ್ಗೆ ೯ ಗಂಟೆಗೆ ದೆಹಲಿಗೆ ತೆರಳುವ ಸಾಧ್ಯತೆಗಳಿವೆ .
ಮಾಧ್ಯಮದೊಂದಿಗೆ ಮಾತನಾಡಿರುವ ನಳಿನ್ ” ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರಿತೇನೆ. ಈ ಬಗ್ಗೆ ತನಿಖೆಯಾಗಬೇಕು. ತನಿಖೆಯ ಬಳಿಕ ಆಡಿಯೋದ ಸತ್ಯಾಸತ್ಯತೆ ಹೊರಬರಲಿದೆ ಎಂದಿರುವ ಕಟೀಲ್, ನಾಯಕತ್ವ ಬದಲಾವಣೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆಗಳಿಲ್ಲ. ನಮ್ಮ ಪಾರ್ಟಿಗೆ ಆತ್ಮ ಯಡಿಯೂರಪ್ಪ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತದ ನಾಯಕ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ ಎಂದು ಹೇಳಿದ್ದಾರೆ
‘ನಿಖೆಯಾಗದೇ ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸಲ್ಲ. ತನಿಖೆ ಮೂಲಕ ಸತ್ಯ ಹೊರಬರಲಿ. ಎಲ್ಲದಕ್ಕೂ ಬಳಿಕ ಉತ್ತರ ನೀಡ್ತೇನೆ’ ಎಂದಿರುವ ಕಟೀಲ್, ಇವತ್ತು ಅಧಿವೇಶನಕ್ಕೆ ಹೋಗ್ತಾ ಇದ್ದು, ಆಡಿಯೋ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ
