ಮಂಗಳೂರು: ಬಿಕರ್ನಕಟ್ಟೆ ಅಪಘಾತ – ಮೃತಪಟ್ಟ ಯುವಕನ ಅಂಗಾಂಗ ದಾನ ವಿಫಲ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬಿಕರ್ನಕಟ್ಟೆ ಅಪಘಾತ – ಮೃತಪಟ್ಟ ಯುವಕನ ಅಂಗಾಂಗ ದಾನ ವಿಫಲ – Vishwanews24

ಮಂಗಳೂರು: ಡಿವೈಡರ್‌ಗೆ ಸ್ಕೂಟರ್‌ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಕುಡುಪುಕಟ್ಟೆಯ ಧೀರಜ್ (25) ಅವರು ಮಂಗಳವಾರ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸುವಾಗ ವಿಳಂಬವಾದ ಹಿನ್ನೆಲೆಯಲ್ಲಿ ಅವರ ಅಂಗಾಂಗ ದಾನವೂ ವಿಫಲವಾಗಿದೆ.

ಧೀರಜ್‌ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯ ವೈದ್ಯರು ಘೋಷಿಸಿದದರು. ಹೀಗಾಗಿ ಕುಟುಂಬದವರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಅಂಗಾಂಗಗಳನ್ನು ಪಡೆಯಲು ಚಾರ್ಟರ್‌ ವಿಮಾನದಲ್ಲಿ ಚೆನ್ನೈಯಿಂದ ತಜ್ಞರ ತಂಡ ಆಗಮಿಸಿತ್ತು. ಆದರೆ ಬೆಂಗಳೂರಿನಿಂದ ತಜ್ಞರ ತಂಡ ಬರುವುದು ತಡವಾದ ಕಾರಣ ಅಂಗಾಂಗ ದಾನ ವಿಫಲವಾಯಿತು. ಬೆಂಗಳೂರಿನ ತಂಡ ಆಗಮಿಸುವ ಮೊದಲೇ ಧೀರಜ್‌ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.

ರವಿವಾರ ಮುಂಜಾನೆ ಸುಮಾರು 2.15ಕ್ಕೆ ಸ್ನೇಹಿತ ಗಣೇಶ್‌ ಅವರೊಂದಿಗೆ ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ನಂತೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಕರ್ನಕಟ್ಟೆ ಉಸ್ಮಾನಿಯ ಕಾಂಪ್ಲೆಕ್ಸ್‌ ಮುಂಭಾಗ ಸ್ಕೂಟರ್‌ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿತ್ತು. ಈ ವೇಳೆ ಧೀರಜ್‌ ಮತ್ತು ಸ್ನೇಹಿತ ಗಣೇಶ್‌ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಧೀರಜ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇಂದು ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಸಿಎಂ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ – Vishwanews24

Leave a Reply