ಮಂಗಳೂರು: ಬೈಕಿಗೆ ಲಾರಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ದಾರುಣ ಸಾವು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬೈಕಿಗೆ ಲಾರಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ದಾರುಣ ಸಾವು – Vishwanews24

ಮಂಗಳೂರು: ಬೈಕಿಗೆ ಹಿಂಬದಿಯಿಂದ ಲಾರಿ ಗುದ್ದಿದ ಪರಿಣಾಮ ಕೊಲ್ಯದ ಕನೀರುತೋಟ ನಿವಾಸಿ ಆರ್ಟಿಸ್ಟ್ ಆಗಿದ್ದ ರವಿಕುಮಾರ್ (55) ಎಂಬವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾ.ಹೆ 66ರ ಎಕ್ಕೂರು ಸಮೀಪ ಏ.09 ರ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಕೋಲ್ಯ ಕಣೀರುತೋಟ ನಿವಾಸಿ ರವಿ ಕುಮಾರ್ (59)ಮೃತಪಟ್ಟ ದುರ್ದೈವಿ.ಇಂದು ಬೆಳಿಗೆ ರವಿ ಅವರು ತಮ್ಮ ಮೋಟಾರ್ ಬೈಕಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದ್ದು ತಲೆ ಸಂಪೂರ್ಣ ಜಜ್ಜಿ ಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎಕ್ಕೂರು ಬಸ್ ನಿಲ್ದಾಣದ ಬಳಿ ಅಪಘಾತ ನಡೆದಿದ್ದು ಸಿಟಿ ಬಸ್ ಅಥವಾ ಲಾರಿ ಹರಿದು ಅಪಘಾತ ಸಂಭವಿಸಿದೆಯೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಧಾವಿಸಿದ ದಕ್ಷಿಣ ಸಂಚಾರಿ ಠಾಣಾ ಪೊಲೀಸರು ರಕ್ತದ ಮಡುವಿದ ರವಿಕುಮಾರ್ ಅವರನ್ನ ಎತ್ತಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದು ಅದಾಗಲೇ ರವಿ ಅವರು ಸಾವನ್ನಪ್ಪಿದ್ದರು.
ಘಟನೆಗೆ ಕಾರಣ ಎಂದು ಹೇಳಲಾಗುತ್ತಿರುವ ಲಾರಿಯೊಂದನ್ನ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ರವಿ ಅವರು ವೃತ್ತಿಪರ ಚಿತ್ರಕಲೆಗಾರರಾಗಿದ್ದು,ಕೋಲ ಮೂಕಾಂಬಿಕಾ ದೇವಸ್ಥಾನದ ಬಳಿ ದಿನಸಿ ಅಂಗಡಿ ಹೊಂದಿದ್ದಾರೆ.

Leave a Reply