ಮಂಗಳೂರು :  ಬೋಲಾಸ್ ಘಟಕಕ್ಕೆ ಆರೋಗ್ಯ ಇಲಾಖೆ ದಾಳಿ ; 1,240 ಕೆ.ಜಿ. ನಕಲಿ ಅಡುಗೆ ಎಣ್ಣೆ ಜಪ್ತಿ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು :  ಬೋಲಾಸ್ ಘಟಕಕ್ಕೆ ಆರೋಗ್ಯ ಇಲಾಖೆ ದಾಳಿ ;  1,240 ಕೆ.ಜಿ. ನಕಲಿ ಅಡುಗೆ ಎಣ್ಣೆ ಜಪ್ತಿ

ಮಂಗಳೂರು : ಮಿಸ್‌ಲ್ಯಾಂಡಿಂಗ್ ಹಾಗೂ ಲೇಬಲಿಂಗ್ ಲೋಪದೋಷಗಳನ್ನು ಎಸಗುತ್ತಿದ್ದ ಹಿನ್ನೆಲೆಯಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಲಾಸ್ ಆಗೋ ಪ್ರೈವೇಟ್ ಲಿಮಿಟೆಡ್’ ಆಹಾರೋತ್ಪನ್ನ ಘಟಕದಿಂದ ಬರೋಬ್ಬರಿ 1,240 ಕೆಜಿ ಅಡುಗೆ ಎಣ್ಣೆಯನ್ನು ಆರೋಗ್ಯ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಿಬ್ಬಂದಿ ದಾಳಿ ಮಾಡಿದಾಗ ಗಂಭೀರ ಲೋಪದೋಷಗಳು ಕಂಡು ಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ತರಿಸಿ, ಅದನ್ನು ‘ಕೋಲ್ಡ್ ಪ್ರೆಸ್ಟ್ ಕಡಲೆಕಾಯಿ ಎಣ್ಣೆ’ ಎಂದು ರೀಪ್ಯಾಕ್ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ರೈಲ್ವೆ ಕಾಮಗಾರಿ ಹಿನ್ನಲೆ : ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆ – vishwanews24

ಬೋಲಾಸ್ ಆಗೋ ಘಟಕದಿಂದ ಒಟ್ಟು 1,240 ಕೆಜಿ ತೂಕದ ಈ ಕೆಳಗಿನ ಅಡುಗೆ ಎಣ್ಣೆ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ.

ಮಿಸ್‌ಬ್ಯಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆಯ ವಿರುದ್ಧ ಕೈಗೊಂಡಿರುವ ಈ ಕಠಿಣ ಕ್ರಮವು, ಗ್ರಾಹಕರ ಹಿತಾಸಕ್ತಿ ಮತ್ತು ಆಹಾರ ಸುರಕ್ಷತೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

Leave a Reply